ಮೂಡುಬಿದಿರೆ, ಜು.14 (DaijiworldNews/MB) : ನಾರಾವಿ ಸೈಂಟ್ ಆಂಥೋನಿ ಪಿಯು ಕಾಲೇಜು ವಿದ್ಯಾರ್ಥಿನಿ, ಮೂಡುಬಿದಿರೆ ಪಣಪಿಲದ ಅಂಕಿತಾ ಅವರು ದ್ವೀತಿಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ಶೇ.98 (588) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಅರ್ಥಶಾಸ್ತ್ರ ವಿಷಯದಲ್ಲಿ 100, ವ್ಯಾಪಾರ ಅಧ್ಯಯನ ವಿಷಯದಲ್ಲಿ 100, ಸ್ಟಾಟಿಸ್ಟಿಕ್ ವಿಷಯದಲ್ಲಿ 99, ಅಕೌಂಟೆನ್ಸಿಯಲ್ಲಿ 98, ಹಿಂದಿಯಲ್ಲಿ 97 ಹಾಗೂ ಇಂಗ್ಲೀಷ್ನಲ್ಲಿ 94 ಅಂಕಗಳನ್ನು ಗಳಿಸಿ ಒಟ್ಟು 588 ಅಂಕಗಳನ್ನು ಪಡೆಯುವ ಮೂಲಕ ಶೇ.98 ಫಲಿತಾಂಶ ಪಡೆದಿದ್ದಾರೆ.
ಲಾಂಡ್ರಿ ಉದ್ಯೋಗ ನಡೆಸುತ್ತಿರುವ ಅಶೋಕ್-ಹರಿಣ ದಂಪತಿಯ ಪುತ್ರಿಯಾದ ಅಂಕಿತಾ. ಅಳಿಯೂರು ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಪಡೆದಿದ್ದು ಪರೀಕ್ಷೆಯಲ್ಲಿ ಮೂಡುಬಿದಿರೆ ತಾಲೂಕು ಸರ್ಕಾರಿ ಪ್ರೌಢ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿದ್ದರು.