ಉಡುಪಿ, ಜು.14 (DaijiworldNews/MB) : ಉಡುಪಿ ನಗರ ಪಾಲಿಕೆ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣದಿಂದಾಗಿ ಉಡುಪಿ ನಗರ ಪಾಲಿಕೆ ಕಚೇರಿ ಸೀಲ್ಡೌನ್ ಮಾಡಲಾಗಿದೆ.


ಇನ್ನು ಈ ಸಿಬ್ಬಂದಿ ಕಳೆದ ಹಲವು ದಿನಗಳಿಂದ ಕ್ವಾರಂಟೈನ್ನಲ್ಲಿ ಇದ್ದು ಮಂಗಳವಾರ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಿಂದ ಉಡುಪಿ ನಗರ ಪಾಲಿಕೆ ಕಚೇರಿ ಸೀಲ್ಡೌನ್ ಮಾಡಲಾಗಿದೆ.
ಹಾಗೆಯೇ ಸಾರ್ವಜನಿಕರ ಪ್ರವೇಶಕ್ಕೂ ನಿರ್ಬಂಧ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.