ಕುಂದಾಪುರ, ಜು14 (Daijiworld News/MSP): ಕಟ್ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳ ಕಾಣಿಕೆ ಹುಂಡಿಯನ್ನು ಒಡೆದು ದೋಚಿದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಮಂಗಳವಾರ ಬೆಳಗಿನ ಜಾವ 3-4 ಗಂಟೆಯ ಅವಧಿಯಲ್ಲಿ ದೈವಸ್ಥಾನದ ಮುಖ್ಯದ್ವಾರವವನ್ನು ಒಡೆದು ಒಳನುಗ್ಗಿದ ಚೋರ ಕಾಣಿಕೆ ಹುಂಡಿಯನ್ನು ಒಡೆದು, ಸುಮಾರು 5-6 ಸಾವಿರ ರೂಪಾಯಿ ಹಣವನ್ನು ದೋಚಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ.ಬೆಳಿಗ್ಗೆ ದೈವಸ್ಥಾನದ ಬಾಗಿಲು ಒಡೆದಿರುವುದು ಕಂಡು ಬಂದಿದೆ.
ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಕಳ್ಳ ಕಾಣಿಕೆ ಹುಂಡಿ ಒಡೆಯುತ್ತಿರುವುದು ಪತ್ತೆಯಾಗಿದೆ. ಈ ದೃಶ್ಯ ಈಗಾಗಲೇ ವೈರಲ್ ಆಗುತ್ತಿದೆ.ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಜ್ ಕುಮಾರ್ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.