ಕುಂದಾಪುರ, ಜು 14 (DaijiworldNews/PY): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿನಿ ಕುಂದಾಪುರದ ಸ್ವಾತಿ ಪೈ 594 (99%) ಅಂಕ ಪಡೆದು ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದುಕೊಂಡ ಇವರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.


ಈ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾತಿ ಪೈ ಅವರು, ನನಗೆ ಕಾಲೇಜಿನಿಂದ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ನಾನು ನಿತ್ಯವೂ ಅಭ್ಯಾಸ ಮಾಡುತ್ತಿದ್ದೆ. ಪ್ರಾಕ್ಟಿಕಲ್ ವಿಷಯಗಳನ್ನು ತರಗತಿ ಮುಗಿದ ನಂತರವೂ ಅಭ್ಯಾಸ ಮಾಡುತ್ತಿದ್ದೆ. ನಮಗೆ ರ್ಯಾಂಕ್ ಸಿಗುವ ಹಾಗೇ ಕಾಲೇಜಿನಿಂದ ತಯಾರಿ ಮಾಡಿಸುತ್ತಿದ್ದರು. ನಾನು ರ್ಯಾಂಕ್ನ ನಿರೀಕ್ಷೆಯಲ್ಲಿದ್ದೆ. ಮುಂದೆ ನಾನು ಸಿ.ಎ ಮಾಡಬೇಕು ಅಂದುಕೊಂಡಿದ್ದೇನೆ. ಅದಕ್ಕೆ ಈಗಾಗಲೇ ಆನ್ಲೈನ್ ಮೂಲಕ ತರಬೇತಿ ಪಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸ್ವಾತಿ ಪೈ ಅವರು ಪಿ.ಶಿವಾನಂದ ಪೈ ಮತ್ತು ಶಿಲ್ಪಾ ಪೈ ಅವರ ಪುತ್ರಿ.