ಉಡುಪಿ, ಜು 14 (DaijiworldNews/PY): ಉಡುಪಿ ವಿದ್ಯೋದಯ ಕಾಲೇಜಿನ ವಿದ್ಯಾರ್ಥಿನಿಗಳಾದ ಗ್ರೀಷ್ಮಾ 593 ಹಾಗೂ ಪದ್ಮಿಕ 592 ಅಂಕ ಪಡೆದುಕೊಂಡಿದ್ದಾರೆ.

ಇಂಗ್ಲೀಷ್ ಭಾಷೆಯಲ್ಲಿ 98 ಅಂಕ, ಹಿಂದಿ ಭಾಷೆಯಲ್ಲಿ 95 ಅಂಕ, ಭೌತಶಾಸ್ತ್ರ-100 ಅಂಕ, ರಸಾಯನ ಶಾಸ್ತ್ರ-100 ಅಂಕ, ಗಣಿತ ಶಾಸ್ತ್ರ-100 ಅಂಕ ಹಾಗೂ ಜೀವಶಾಸ್ತ್ರದಲ್ಲಿ - 100 ಅಂಕ ಪಡೆದು ಒಟ್ಟು 593 ಪಡೆಯುವ ಮೂಲಕ ಗ್ರೀಷ್ಮಾ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇಂಗ್ಲೀಷ್ ಭಾಷೆಯಲ್ಲಿ 97 ಅಂಕ, ಹಿಂದಿ ಭಾಷೆಯಲ್ಲಿ 98 ಅಂಕ, ಭೌತಶಾಸ್ತ್ರ-99 ಅಂಕ, ರಸಾಯನ ಶಾಸ್ತ್ರ-98 ಅಂಕ, ಗಣಿತ ಶಾಸ್ತ್ರ-100 ಅಂಕ ಹಾಗೂ ಜೀವಶಾಸ್ತ್ರದಲ್ಲಿ-100 ಅಂಕ ಪಡೆದು ಒಟ್ಟು 593 ಪಡೆಯುವ ಮೂಲಕ ಪದ್ಮಿಕಾ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಅಭಿಜ್ಞಾ ರಾವ್ 596 ಅಂಕ ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿದ್ದು, ಇವರು ಸಂಸ್ಕೃತ ಭಾಷೆಯಲ್ಲಿ 100, ಭೌತ ಶಾಸ್ತ್ರ-100, ರಸಾಯನ ಶಾಸ್ತ್ರ 100, ಗಣಿತ ಶಾಸ್ತ್ರ 100, ಕಂಪ್ಯೂಟರ್ ವಿಜ್ಞಾನದಲ್ಲಿ 100 ಅಂಕ,ಇಂಗ್ಲೀಷ್ ಭಾಷೆಯಲ್ಲಿ 96 ಅಂಕ ಪಡೆದು ಒಟ್ಟು 596 ಅಂಕ ಪಡೆದುಕೊಂಡಿದ್ದಾರೆ.