ಉಡುಪಿ, ಜು 14 (DaijiworldNews/PY): ಉಡುಪಿ ಜಿಲ್ಲೆಯಲ್ಲಿ ಮತ್ತೆ 72 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1733ಕ್ಕೆ ಏರಿಕೆಯಾಗಿದೆ.

ಈ ಪೈಕಿ ಉಡುಪಿಯಲ್ಲಿ 16, ಕುಂದಾಪುರದಲ್ಲಿ 41 ಮಂದಿ, ಹಾಗೂ ಕಾರ್ಕಳದಲ್ಲಿ 15 ಮಂದಿ ಸೇರಿದ್ದಾರೆ.
ಈ ನಡುವೆ ಮಂಗಳವಾರ 40 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 1360 ಮಂದಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 370 ಸಕ್ರಿಯ ಪ್ರಕರಣಗಳಿವೆ.