ಕಾಸರಗೋಡು, ಜು 14 (DaijiworldNews/PY): ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 44 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಪೈಕಿ 20 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, 15 ಮಂದಿ ವಿದೇಶಗಳಿಂದ, 9 ಮಂದಿ ಇತರ ರಾಜ್ಯಗಳಿಂದ ಬಂದವರಿಗೆ ಸೋಂಕು ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಮಂಜೇಶ್ವರ ಪಂಚಾಯತ್ ನ 42, 62 ವರ್ಷದ ವ್ಯಕ್ತಿಗಳು, ಮೀಂಜ ಪಂಚಾಯತ್ ನ 62 ವರ್ಷದ ಮಹಿಳೆ, 32 ವರ್ಷದ ವ್ಯಕ್ತಿ, ಚೆಂಗಳ ಪಂಚಾಯತ್ನ 26, 62, 29 ವರ್ಷದ ಮಹಿಳೆಯರು, 32,16,34,37,75 ವರ್ಷದ ವ್ಯಕ್ತಿಗಳು, ಚೆಮ್ನಾಡ್ ಪಂಚಾಯತ್ ನ 26 ವರ್ಷದ ಮಹಿಳೆ, 54 ವರ್ಷದ ವ್ಯಕ್ತಿ, ಮಧೂರು ಪಂಚಾಯತ್ನ 26 ವರ್ಷದ ಮಹಿಳೆ, 26,35 ವರ್ಷದ ವ್ಯಕ್ತಿಗಳು, ಕಾಸರಗೋಡು ನಗರಸಭೆ ವ್ಯಾಪ್ತಿಯ 48 ವರ್ಷದ ಇಬ್ಬರು ವ್ಯಕ್ತಿಗಳು (ಇವರಲ್ಲಿ ಒಬ್ಬರ ಸಂಪರ್ಕ ಮಾಹಿತಿ ಲಭಿಸಿಲ್ಲ.), ಮೊಗ್ರಾಲ್ ಪುತ್ತೂರು ಪಂಚಾಯತ್ನ 23 ವರ್ಷದ ಮಹಿಳೆ ಸೋಂಕು ತಗುಲಿದೆ.
ಶಾರ್ಜಾದಿಂದ ಬಂದಿದ್ದ ಚೆಮ್ನಾಡ್ ಪಂಚಾಯತ್ ನ 45 ವರ್ಷದ ವ್ಯಕ್ತಿ, ಪಳ್ಳಿಕ್ಕರೆ ಪಂಚಾಯತ್ನ 33 ವರ್ಷದ ವ್ಯಕ್ತಿ, ಕಾರಡ್ಕ ಪಂಚಾಯತ್ನ 58 ವರ್ಷದ ವ್ಯಕ್ತಿ, ಖತಾರ್ನಿಂದ ಆಗಮಿಸಿದ್ದ ಮಡಿಕೈ ಪಂಚಾಯತ್ನ 35 ವರ್ಷದ ನಿವಾಸಿ, ಕಾಸರಗೋಡು ನಗರಸಭೆ ವ್ಯಾಪ್ತಿಯ 48 ವರ್ಷದ ವ್ಯಕ್ತಿ, ದುಬಾಯಿಯಿಂದ ಬಂದಿದ್ದ ಚೆಮ್ನಾಡ್ ಪಂಚಾಯತ್ನ 32 ವರ್ಷದ ವ್ಯಕ್ತಿ, ಬದಿಯಡ್ಕ ಪಂಚಾಯತ್ನ 29 ವರ್ಷದ ವ್ಯಕ್ತಿ, ಕಾಞಂಗಾಡ್ ನಗರಸಭೆಯ 28 ವರ್ಷದ ನಿವಾಸಿ ವ್ಯಕ್ತಿ, ಪಳ್ಳಿಕ್ಕರೆ ಪಂಚಾಯತ್ನ 29 ವರ್ಷದ ನಿವಾಸಿ, ಅಜಾನೂರು ಪಂಚಾಯತ್ನ 35 ವರ್ಷದ ನಿವಾಸಿ, ಕಾರಡ್ಕ ಪಂಚಾಯತ್ನ 40 ವರ್ಷದ ನಿವಾಸಿ, ಕಾಸರಗೋಡು ನಗರಸಭೆ ವ್ಯಾಪ್ತಿಯ 33,26 ವರ್ಷದ ವ್ಯಕ್ತಿಗಳು, ಕುವೈತ್ನಿಂದ ಬಂದಿದ್ದ ಪಡನ್ನ ಪಂಚಾಯತ್ನ 40 ವರ್ಷದ ನಿವಾಸಿ, ಸೌದಿಯಿಂದ ಆಗಮಿಸಿದ್ದ ವಲಿಯಪರಂಬ ಪಂಚಾಯತ್ ನಿವಾಸಿ 52 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ.
ಮಂಗಳೂರಿನಿಂದ ಆಗಮಿಸಿದ್ದ, ಚೆಂಗಳ ಪಂಚಾಯತ್ ನ 27 ವರ್ಷದ ನಿವಾಸಿ, ಮಂಜೇಶ್ವರ ಪಂಚಾಯತ್ನ 35 ವರ್ಷದ ನಿವಾಸಿ, ಉದುಮಾ ಪಂಚಾಯತ್ನ ಒಂದೇ ಕುಟುಂಬದ ಸದಸ್ಯರಾದ 3,6 ವರ್ಷದ ಹೆಣ್ಣು ಮಕ್ಕಳು, 31 ವರ್ಷದ ವ್ಯಕ್ತಿ, ಚೆಮ್ನಾಡ್ ಪಂಚಾಯತ್ನ 38 ವರ್ಷದ ವ್ಯಕ್ತಿ, ಕರ್ನಾಟಕದಿಂದ ಬಂದಿದ್ದ ಕುಂಬಳೆ ಪಂಚಾಯತ್ನ 55 ವರ್ಷದ ನಿವಾಸಿ, ಮೊಗ್ರಾಲ್ ಪಂಚಾಯತ್ ನಿವಾಸಿ 36 ವರ್ಷದ ನಿವಾಸಿ, ಹೈದರಾಬಾದ್ ನಿಂದ ಆಗಮಿಸಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ 30 ವರ್ಷದ ನಿವಾಸಿಗಳು ಸೋಂಕು ಬಾಧಿತರು.
ಕಾಸರಗೋಡು ಜಿಲ್ಲೆಯಲ್ಲಿ 6317 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 5535 ಮಂದಿ, ಸಾಂಸ್ಥಿಕ ನಿಗಾದಲ್ಲಿ388 ಮಂದಿ ಇದ್ದಾರೆ. ನೂತನವಾಗಿ 551 ಮಂದಿ ನಿಗಾ ಪ್ರವೇಶಿಸಿದ್ದಾರೆ. 559 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 313 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 753 ಮಂದಿಯ ತಪಾಸಣೆ ಫಲಿತಾಂಶ ಲಭಿಸಿಲ್ಲ.
ಜಿಲ್ಲೆಯಲ್ಲಿ ಬುಧವಾರ 5 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಕುಂಬಳೆ ಪಂಚಾಯತ್ ನ 21 ವರ್ಷದ ವ್ಯಕ್ತಿ, ಉದುಮಾ ಪಂಚಾಯತ್ ನ 30, 27, 26 ವರ್ಷದ ವ್ಯಕ್ತಿ ಗಳು, ಮುಳಿಯಾರು ಪಂಚಾಯತ್ ನ 38 ವರ್ಷದ ವ್ಯಕ್ತಿಗೆ ಕೋವಿಡ್ ನೆಗೆಟಿವ್ ಆಗಿದೆ.
ಇದುವರೆಗೆ ಜಿಲ್ಲೆಯಲ್ಲಿ 694 ಮಂದಿಗೆ ಸೋಂಕು ತಗಲಿದೆ. ಮಂಗಳವಾರ ಐದು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈ ಮೂಲಕ 448 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 6317 ಮಂದಿ ನಿಗಾದಲ್ಲಿದ್ದು, 388 ಮಂದಿ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.