ಬಂಟ್ವಾಳ, ಜೂ 16 (Daijiworld News/MSP): ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಬೆರೆತ ವ್ಯಕ್ತಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾನೂನು ಉಲ್ಲಂಘಿಸಿದ ವ್ಯಕ್ತಿಯನ್ನು ತುಂಬೆ ಗ್ರಾಮದ ಕಾಣೆಮಾರ್ ನಿವಾಸಿಯಾದ ಸಾಹಿದ್ (32) ಎಂದು ಗುರುತಿಸಲಾಗಿದೆ.
ತುಂಬೆ ಗ್ರಾಮ ಪಂಚಾಯತ್ ಸಾಹಿದ್ ಗೆ ಜು.೦೯ ರಿಂದ ಜು.23 ರವರೆಗೆ ಹೋಮ್ ಕಾರಂಟೈನ್ ಇರುವಂತೆ ತುಂಬೆ ಗ್ರಾಮ ಪಂಚಾಯತ್ ನಿಂದ ನೋಟಿಸು ಕೂಡ ಜಾರಿ ಮಾಡಿತ್ತು. ಆದರೆ ಜುಲೈ 14 ರಂದು ಬಂಟ್ವಾಳ ಪೊಲೀಸ್ ಠಾಣಾ ಸಿಬ್ಬಂದಿ ಮದ್ಯಾಹ್ನ 12.30 ಗಂಟೆ ಸುಮಾರಿಗೆ ಹೋಮ್ ಕಾರಂಟೈನಲ್ಲಿದ್ದ ಸಾಹಿದ್ ನನ್ನು ಪರಿಶೀಲಿಸಲು ಬಂದಾಗ ಆತ ಮನೆಯಲ್ಲಿರಲಿಲ್ಲ. ಈ ಬಗ್ಗೆ ಮನೆಯವರ ಬಳಿ ವಿಚಾರಿಸಿದಾಗ ಕೊವೀಡ್ ನಿಮಿತ್ತ ಸರ್ಕಾರ ಅದೇಶಿಸಿರುವ ಹೋಮ್ ಕಾರಂಟೈನ್ ನಿಯಮಾವಳಿಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಜನರೊಂದರೆ ಬೆರೆತಿರುವುದು ತಿಳಿದು ಬಂದಿದೆ.
ಹೀಗಾಗಿ ಇತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ : 269,270, 271 ಐಪಿಸಿ ಮತ್ತು ಕಲಂ 5(1) ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ ಕಾಯ್ದೆ 2020 ಯಂತೆ ಪ್ರಕರಣ ದಾಖಲಿಸಲಾಗಿದೆ.