ಉಳ್ಳಾಲ, ಜು 15 (Daijiworld News/MSP): ಉಳ್ಳಾಲ ವ್ಯಾಪ್ತಿಯಲ್ಲಿ ಎಂಟು ವರ್ಷದ ಬಾಲಕ ಸೇರಿದಂತೆ ಒಟ್ಟು 15 ಮಂದಿಗೆ ಸೋಂಕು ತಗುಲಿದ್ದು , ಉಳ್ಳಾಲ ಅರೆಕೆರೆಯ ಒಂದೇ ಕಡೆ 6 ಮಂದಿಗೆ ಸೋಂಕು ತಗುಲಿದ್ದು, ಉಳಿದಂತೆ ಸೋಮೇಶ್ವರ, ಮುನ್ನೂರು, ಕಿನ್ಯ ಗ್ರಾಮ ವ್ಯಾಪ್ತಿಯಲ್ಲಿ ಸೋಂಕು ಪ್ರಕರಣ ದಾಖಲಾಗಿದೆ.
![]()
ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಅಕ್ಕರೆಕೆರೆ 20, 16, 53, 39, 18 ಪುರುಷರು ಮತ್ತು 23, 35 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದ್ದು, ಉಳ್ಳಾಲ ಕೋಟೆಪುರದ 14ರ ಬಾಲಕ , ಮಾಸ್ತಿಕಟ್ಟೆ ಅಝಾದ್ ನಗರದ 8ರ ಬಾಲಕ, 65ರ ಮಹಿಳೆಗೆ ಸೋಂಕು ತಗುಲಿದೆ ಒಟ್ಟು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ 10 ಮಂದಿಗೆ ಸೋಂಕು ತಗುಲಿದಂತಾಗಿದೆ.
ಮುನ್ನೂರು ಗ್ರಾಮದ 24ರ ಯುವತಿ ಪಂಡಿತ್ಹೌಸ್ನ 46ರ ಮಹಿಳೆ ಮತ್ತು ಕಿನ್ಯ ಗ್ರಾಮದ 22ರ ಯುವತಿ ಮತ್ತು ಸೋಮೇಶ್ವರ ಕುಂಪಲದ 20ರ ಯುವಕನಿಗೆ ಸೊಂಕು ತಗುಲಿದ್ದು ಖಾಸಗಿ ಆಸ್ಪತ್ರೆಯ ಹಾಸ್ಟೆಲ್ ನಿವಾಸಿಗೆ ಸೋಂಕು ದೃಢವಾಗಿದೆ.