ಉಡುಪಿ, ಜು 15 (DaijiworldNews/PY): ಕೊಲ್ಲೂರು ಶ್ರೀಮೂಕಾಂಬಿಕ ದೇವಸ್ಥಾನಕ್ಕೆ ಸಚಿವ ಭೈರತಿ ಬಸವರಾಜ್ ಅವರು ಆಗಮಿಸಿದ್ದು, ಬೆಳ್ಳಿಯ ಖಡ್ಗವನ್ನು ದೇವಿಗೆ ಹರಕೆಯ ರೂಪದಲ್ಲಿ ಸಮರ್ಪಿಸಿದ್ದಾರೆ.

ಸಚಿವರು ರಾಜಕೀಯ ಗೊಂದಲದ ವೇಳೆಯಲ್ಲಿ ದೇವಿಗೆ ಹೇಳಿಕೊಂಡಿದ್ದ ಹರಕೆತೀರಿಸಲು ಕೊಲ್ಲೂರಿಗೆ ಭೇಟಿ ನೀಡಿದ್ದರು. ತಮ್ಮ ಇಷ್ಟಾರ್ಥ ನೆರವೇರಿದ್ದ ಸಂದರ್ಭ ತಮಿಳುನಾಡಿನ ಮುಖ್ಯಮಂತ್ರಿ ದಿ.ಎಂ.ಜಿ.ರಾಮಚಂದ್ರನ್ ಅವರು ಈ ಹಿಂದೆ ಮೂಕಾಂಬಿಕಾ ದೇವಿಗೆ ಚಿನ್ನದ ಖಡ್ಗವನ್ನು ಕಾಣಿಕೆಯ ರೂಪದಲ್ಲಿ ಸಮರ್ಪಿಸಿದ್ದರು.
ಸಚಿವರೊಂದಿಗೆ ದೇಗುಲದ ಆಡಳಿತಾಧಿಕಾರಿ ಹಾಗೂ ಉಪಕಮೀಷನರ್ ರಾಜು, ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ.ಸುತಗುಂಡಿ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಇದ್ದರು.