ಕಾಸರಗೋಡು, ಜು. 15, (DaijiworldNews/SM): ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿದ್ದು, ಬುಧವಾರ ದಾಖಲೆಯ74 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.

ಈ ಪೈಕಿ 57ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ವಿದೇಶದಿಂದ ಬಂದ ಆರು, ಹೊರ ರಾಜ್ಯಗಳಿಂದ ಬಂದ 11 ಮಂದಿಗೆ ಸೋಂಕು ದೃಢಪಟ್ಟಿದೆ. ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಧಿಕ 28 ಪ್ರಕರಣಗಳು ಬುಧವಾರ ಪತ್ತೆಯಾಗಿದೆ.
ಮಂಜೇಶ್ವರ 16, ಮಧೂರು 9, ಕಾಸರಗೋಡು , ಮಂಗಲ್ಪಾಡಿ , ಕುಂಬಳೆ ತಲಾ 3, ಮೊಗ್ರಾಲ್ ಪುತ್ತೂರು , ಅಜನೂರು , ಕುಂಬಳೆ ತಲಾ 3, ಚೆಮ್ನಾಡ್ , ಉದುಮ , ಮೀ0 ಜ , ಚೆರ್ವತ್ತೂರು , ಕಾರಡ್ಕ , ತ್ರಿಕ್ಕರಿಪುರ , ವರ್ಕಾಡಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇದುವರೆಗೆ ಸೋಂಕು ದ್ರಢಪಟ್ಟವರ ಸಂಖ್ಯೆ 768 ಕ್ಕೆ ಏರಿಕೆಯಾಗಿದೆ. ಬುಧವಾರ 22 ಮಂದಿ ಗುಣಮುಖರಾಗಿದ್ದಾರೆ. 470 ಮಂದಿ ಇದುವರೆಗೆ ಗುಣಮುಖರಾಗಿದ್ದು, 298 ಮಂದಿ ಚಿಕಿತ್ಸೆಯಲ್ಲಿದ್ದಾರೆ.
6296 ಮಂದಿ ನಿಗಾದಲ್ಲಿದ್ದು, 779 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.