ಮಂಗಳೂರು,ಜು 16 (Daijiworld News/MSP): ಲಾಕ್ ಡೌನ್ ಸಂಧರ್ಭದಲ್ಲಿ ಜನತೆಗೆ ಆಹಾರ ಸಾಮಗ್ರಿಗಳನ್ನು, ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ಒದಗಿಸಬೇಕು ಹಾಗೂ ಸೀಲ್ ಡೌನ್ ಪ್ರದೇಶಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಸಿಪಿಎಂ ನೇತೃತ್ವದಲ್ಲಿ ನಗರದಲ್ಲಿಂದು ಭಿತ್ತಿಚಿತ್ರ ಪ್ರದರ್ಶಿಸುವ ಮೂಲಕ ಧರಣಿ ನಡೆಯಿತು.

ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಈ ಹಿಂದಿನ ಲಾಕ್ ಡೌನ್ ನಿಂದಾಗಿ ದುಡಿಯುವ ವರ್ಗದ ಜನತೆ ತೀರಾ ಸಂಕಷ್ಟಗಳಿಗೆ ಒಳಗಾಗಿದ್ದು, ಈಗ ಮತ್ತೆ ವಿಧಿಸಿರುವ ಲಾಕ್ ಡೌನ್ ನಿಂದ ಕಂಗಾಲಾಗಿದ್ದಾರೆ. ಆದ್ದರಿಂದ ಉದ್ಯೋಗವಿಲ್ಲದೆ, ಕಾಸಿಲ್ಲದೆ, ಆಹಾರವಿಲ್ಲದೆ ಪರದಾಡುವ ತೀರಾ ಬಡ ಕಾರ್ಮಿಕರಿಗೆ ಅಹಾರ ಸಾಮಗ್ರಿಗಳನ್ನು ಜಿಲ್ಲಾಡಳಿತ ಒದಗಿಸಬೇಕು ಎಂದು ಆಗ್ರಹಿಸಿದರು.