ತಿರುವನಂತಪುರ, ಏ 14: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಅಪ್ರಾಪ್ತೆ ಮಗುವಿನ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿದ ಘಟನೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಹಿನ್ನಲೆ ಕೇರಳದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆದಿದ್ದು, ಘಟನೆಯನ್ನು ಖಂಡಿಸಿದ್ದಾರೆ. ನಮ್ಮ ಮನೆಯಲ್ಲಿ ಮಕ್ಕಳಿದ್ದಾರೆ. ಹಾಗಾಗಿ ನಮ್ಮ ಮನೆಗೆ ಸಂಘ ಪರಿವಾರದವರು ಬರಬಾರದು ಎಂದು ಪೋಸ್ಟರ್ ಅಂಟಿಸಿದ್ದಾರೆ.
ತಿರುವನಂತಪುರ ಜಿಲ್ಲೆಯ ಕಳಮಚ್ಚಳ್ ಎಂಬ ಗ್ರಾಮದಲ್ಲಿ ಹಲವಾರು ಮನೆಯ ಮುಂದು ಈ ರೀತಿ ಪೋಸ್ಟರ್ ಅಂಟಿಸಲಾಗಿದ್ದು, ಸಂಘ ಪರಿವಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಸಂಘ ಪರಿವಾರದವರು ಮನೆಗೆ ಪ್ರವೇಶಿಸಬಾದು. ಮನೆಯಲ್ಲಿ ಮಕ್ಕಳಿರುವುದಾಗಿ ಮನೆಯ ಮುಂದೆ ಅಂಟಿಸಿರುವ ಪೋಸ್ಟರ್ ಗಳಲ್ಲಿ ಬರೆಯಲಾಗಿದೆ. ಮಾತ್ರವಲ್ಲ, ಮನೆ ಮನೆಗೆ ಮತ ಕೇಳಲು ಬರುವ ಬಿಜೆಪಿಗರು ಮನೆಯ ಒಳಗೆ ಪ್ರವೇಶಿಸದೆ, ಅಭ್ಯರ್ಥಿಗಳ ಕರಪತ್ರವನ್ನು ಗೇಟಿನ ಹೊರಗಿಟ್ಟು ಹೋಗುವಂತೆ ವಿನಂತಿಸಿಕೊಂಡಿರುವ ಪೋಸ್ಟರ್ ಗಳನ್ನು ಅಳವಡಿಸಿದ್ದಾರೆ.