ಮಂಗಳೂರು, ಜು.16 (DaijiworldNews/SM): ದ.ಕ. ಜಿಲ್ಲೆಯಲ್ಲಿ ಒಂದೇ ದಿನ ಅತ್ಯಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಗುರುವಾರದಂದು ಜಿಲ್ಲೆಯಲ್ಲಿ 238 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

106 ಮಂದಿಯಲ್ಲಿ ಐಎಲ್ಐ ಪ್ರಕರಣ ಪತ್ತೆಯಾಗಿದ್ದು, 73 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಉಳಿದಂತೆ ಪ್ರಾಥಮಿಕ ಸಂಪರ್ಕದಿಂದ 23 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ವಿದೇಶದಿಂದ ಬಂದ 19 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 17 ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದೆ.
ಇನ್ನು ಜಿಲ್ಲೆಯಲ್ಲಿ ಗುರುವಾರದಂದು 74 ಮಂದಿ ಕೊರೊನಾ ಮುಕ್ತರಾಗಿದ್ದು, ಜಿಲ್ಲೆಯಲ್ಲಿ ಇಲ್ಲಿಯ ತನಕ 1163 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 2763 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಸದ್ಯ 1537 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 23348 ಮಂದಿಯ ವರದಿ ಇಲ್ಲಿಯ ತನಕ ನೆಗೆಟಿವ್ ಆಗಿದೆ.