ಮಂಗಳೂರು, ಜು.16 (DaijiworldNews/SM): ದ. ಕ. ಜಿಲ್ಲೆಯಲ್ಲಿ ಗುರುವಾರ ಆರು ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ ೬೩ಕ್ಕೆ ಏರಿಕೆಯಾಗಿದೆ.

ಮಂಗಳೂರಿನ ಮುಲ್ಕಿ ನಿವಾಸಿ 44 ವರ್ಷದ ವ್ಯಕ್ತಿ, ಬೆಳಗಾವಿಯ ರಾಮದುರ್ಗ ನಿವಾಸಿ 68 ವರ್ಷದ ವ್ಯಕ್ತಿ, ಮಂಗಳೂರಿನ 62 ವರ್ಷದ ವ್ಯಕ್ತಿ, ಮಂಗಳೂರಿನ 66 ವರ್ಷದ ವ್ಯಕ್ತಿ, ಬಂಟ್ವಾಳ ದ 47 ವರ್ಷದ ಮಹಿಳೆ ಹಾಗೂ ಮಂಗಳೂರಿನ 76 ವರ್ಷದ ಮಹಿಳೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಮೃತರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಎಲ್ಲಾ ಆರು ಮಂದಿ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟವರಾಗಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ದ.ಕ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ 63ಕ್ಕೇರಿಕೆಯಾಗಿದೆ.