ಕೊಣಾಜೆ, ಏ 15: ಮನೆಗೆ ನುಗ್ಗಿದ ನಾಲ್ವರು ಕಳ್ಳರ ತಂಡದಲ್ಲಿ ಓರ್ವನನ್ನು ಬೋಳಿಯಾರು ನಾಗರಿಕರು ರೆಡ್ ಹ್ಯಾಂಡಾಗಿ ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಡಿಪು ಕರ್ನಾಟಕ ಬ್ಯಾಂಕಿನ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಕಾರ್ಯ ನಿರ್ವಹಿಸುವ ತಮಿಳುನಾಡು ಮೂಲದ 70ರ ಹರೆಯದ ವೃದ್ಧನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ನಿನ್ನೆ ತಡರಾತ್ರಿ ಮೂವರು ಮಹಮ್ಮದ್ ಎಂಬವರ ಮನೆಯ ಮುಂಬಾಗಿಲಿನ ಚಿಲಕಕ್ಕೆ ಹಗ್ಗದಿಂದ ಕಟ್ಟಿ ಹಿಂಬಾಗಿಲನ್ನು ಒಡೆದು ಒಳನುಗ್ಗಿದ್ದರು. ಶಬ್ದ ಕೇಳಿ ಮನೆಮಂದಿ ಎಚ್ಚರಗೊಂಡಾಗ ಮೂವರು ಕಳ್ಳರು ಅಲ್ಲಿಂದ ಪರಾರಿಯಾಗಿದ್ದರು. ಮತ್ತೆ ಅಲ್ಪ ದೂರದಲ್ಲಿ ಇನ್ನೊಂದು ಮನೆಗೆ ನುಗ್ಗಲು ಯತ್ನಿಸುವ ಸಂದರ್ಭ, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ನಾಲ್ವರಲ್ಲಿ ಓರ್ವನನ್ನು ಹಿಡಿದಿದ್ದಾರೆ. ಹೆಚ್ಚಿನ ವಿಚಾರಣೆಗೆ ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಉಳಿದ ಮೂವರನ್ನು ತಮಿಳುನಾಡು ಮೂಲದವರೇ ಆಗಿರಬಹುದೆಂದು ಸಂಶಯಿಸಲಾಗಿದ್ದು, ಅವರಿಗಾಗಿ ಕೊಣಾಜೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.