ಕಾಸರಗೋಡು, ಜು. 19 (DaijiworldNews/SM): ಕೊರೊನಾ ನಿಗಾ ಕೇಂದ್ರದಲ್ಲಿದ್ದ ಪೋಕ್ಸೋ ಪ್ರಕರಣದ ಆರೋಪಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮಾಲೋಮ್ ನ ಶೈಜು(38) ಆತ್ಮಹತ್ಯೆ ಮಾಡಿಕೊಂದಾತ.

ರಾಜಾಪುರ ಪೂಡಂಕಲ್ಲು ತಾಲೂಕು ಆಸ್ಪತ್ರೆಯ ಸೆಲ್ ನಲ್ಲಿ ಘಟನೆ ನಡೆದಿದೆ. ಜುಲೈ 17ರಂದು ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ವೈದ್ಯಕೀಯ ತಪಾಸಣೆಯಲ್ಲಿ ಈತನಿಗೆ ನೆಗಟಿವ್ ಪತ್ತೆಯಾಗಿತ್ತು.