ಬಂಟ್ವಾಳ, ಜು. 19 (DaijiworldNews/SM): ಸರಕಾರಿ ಶಾಲೆಯೊಂದರ ಮೇಲ್ಚಾವಣಿ ಹಠಾತ್ ಆಗಿ ಕುಸಿದು ಬಿದ್ದು ಗೋಡೆಗಳಿಗೆ ಹಾನಿಯಾಗಿರುವ ಘಟನೆ ತಾಲೂಕಿನ ಮಣಿನಾಲ್ಕೂರು ಗ್ರಾಮದ ನಡುಮೊಗರು ಎಂಬಲ್ಲಿ ನಡೆದಿದೆ.

ಸರಕಾರಿ ಹಿ.ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಆದಿತ್ಯವಾರ ಸಂಜೆ ವೇಳೆಗೆ ಕುಸಿದು ಬಿದ್ದಿದೆ. ಸುಮಾರು ವರ್ಷಗಳ ಹಳೆಯದಾದ ಕಟ್ಟಡ ಇದಾಗಿದ್ದು, ಕಳೆದ ವರ್ಷವಷ್ಟೇ ಶಾಸಕರ ಮಳೆಹಾನಿಯ ಅನುದಾನದಲ್ಲಿ ರಿಪೇರಿ ಮಾಡಲಾಗಿತ್ತು.
ಆದರೆ, ಇಂದು ಸಂಜೆ ದಿಢೀರ್ ಅಗಿ ಮೇಲ್ಚಾವಣಿ ಕುಸಿದು ಬಿದ್ದಿದೆ. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.