ಬೆಳ್ಮಣ್, ಜು 20 (Daijiworld News/MSP): ಹೋಟೆಲ್ ಮಾಲಿಕರಾಗಿದ್ದ ಮಾಜಿ ತಾಲೂಕು ಪಂಚಾಯತಿ ಸದಸ್ಯರೊಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ದೃಢವಾದ ಘಟನೆ ಬೆಳ್ಮಣ್ ನಲ್ಲಿ ನಡೆದಿದೆ.

ಬೆಳ್ಮಣ್ ನಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದ ಇವರಿಗೆ ಕೋವಿಡ್ ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗೆ ಗ್ರಾಮ ಪಂಚಾಯತಿ ಬೆಳ್ಮಣ್ ನ ಸದಸ್ಯರೊಬ್ಬರಿಗೆ ಹಾಗೂ ಅವರ ಪತ್ನಿಗೂ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಒಟ್ಟಾರೆ ಬೆಳ್ಮಣ್ ಭಾಗದಲ್ಲಿ ಕೊರೊನಾ ಪ್ರಕರಣ ಪದೇ ಪದೇ ವರದಿಯಾಗುತ್ತಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ.