ಉಡುಪಿ, ಏ 16 : ಅಷ್ಟ ಮಠಾಧಿಪತಿಗಳು ಸಮಾಜಕ್ಕೆ ಏನೂ ಕೊಡುಗೆ ನೀಡಿಲ್ಲ ಎಂಬ ದೆಹಲಿ ವಿಶ್ವ ವಿದ್ಯಾನಿಲಯದ ಪ್ರೊಪೆಸರ್ ಪುರೋಷತ್ತಮ ತಿಳಿಮಲೆಯ ಆರೋಪ ವಿರುದ್ದ ಪಲಿಮಾರು ಮಠ , ಪರ್ಯಾಯ ಮಠಾದೀಶ ಶ್ರೀ ವಿದ್ಯಾದೀಶ ಸ್ವಾಮೀಜಿ ಅವರು ಉಡುಪಿಯಲ್ಲಿ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ. ಉಡುಪಿ ಅಷ್ಠ ಮಠದ ಸ್ವಾಮೀಜಿಗಳು ಸಮಾಜಕ್ಕೆಏನು ಮಾಡಿಲ್ಲ ಎಂಬ ಆರೋಪ ಮಾಡುವವರು ಉಡುಪಿಗೆ ಬಂದೇ ಇಲ್ಲ ಅನ್ನಿಸುತ್ತದೆ. ಶೈಕ್ಷಣಿಕ , ಸಾಮಾಜಿಕ , ಹಾಗೂ ಧಾರ್ಮಿಕ ಕಾರ್ಯಗಳಿಗೆ ಉಡುಪಿಯ ಅಷ್ಠ ಮಠಾದೀಶರು ಅತ್ಯಂತ ಹೆಚ್ಚಿನ ಒತ್ತು ನೀಡಿದ್ದಾರೆ.
ವಿನಾಃ ಕಾರಣ ಅಷ್ಠ ಮಠಾದೀಶರ ವಿರುದ್ದ ಆರೋಪ ಹೊರಿಸುವ ಬದಲು ಉಡುಪಿ ಶ್ರೀ ಕೃಷ್ಣ ನಾಡಿಗೆ ಬಂದು ಈ ವಿಚಾರದ ಬಗ್ಗೆ ಅದ್ಯಯನ ಮಾಡಲಿ. ಇತ್ತೀಚಿನ ದಿನಗಳಲ್ಲಿ ಕೇವಲ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಲಾಗುತ್ತಿದೆ. ಮಠ ಮಂದಿರಗಳನ್ನು ಸರಕಾರ ಸ್ವಾಧೀನ ಪಡಿಸುವ ಹುನ್ನಾರ ನಡೆಸುತ್ತಿದೆ. ಎಲ್ಲಾ ಧರ್ಮದ ಮಠ ಮಂದಿರಗಳನ್ನು ಸರಕಾರಕ್ಕೆ ಸ್ವಾದೀನ ಪಡಿಸುವುದಾದರೆ ನನ್ನ ಸಂಪೂರ್ಣ ಬೆಂಬಲವಿದೆ. ಕೇವಲ ಹಿಂದೂ ಧರ್ಮದ ಬಗ್ಗೆ ಅಧಿಕಾರ ತೋರಿಸುವುದಾದರೆ ನನ್ನ ವಿರೋಧವಿದೆ. ದೇಶದಲ್ಲಿ ಜಾತಿ ಧರ್ಮ ಎಂಬ ವಿಷ ಬೀಜ ಮೊಳಕೆ ಒಡೆದಿದೆ. ಸರಕಾರ ಕೂಡಾ ತನ್ನ ಕಾರ್ಯ ಚಟುವಟಿಕೆಯಲ್ಲಿ ಜಾತಿ ಧರ್ಮ ಎಂಬ ವಿಡಂಭನೆಯನ್ನು ಮಾಡಿಕೊಂಡಿದೆ. ಹೀಗಿರುವಾಗ ಜಾತಿ ಧರ್ಮ ಎಂಬ ವಿಚಾರಗಳು ದೇಶದಲ್ಲಿ ತೊಲಗುವುದು ಹೇಗೆ ಸಾದ್ಯ. ಇನ್ನೂ ಭಗವದ್ಗೀತೆಯ ತೋರಿಸಿ ಅಷ್ಠ ಮಠಾಧಿಪತಿಗಳು ಜನರನ್ನು ವಂಚಿಸುತ್ತಿದ್ದಾರೆ ಎಂಬ ಆರೋಪ ಕುರಿತು ಕೂಡಾ ಪ್ರತಿಕ್ರಿಯಿಸಿ ಮಾತನಾಡಿದ್ರು. ಭಗವದ್ಗೀತೆ ಹಿಂದೂಗಳ ಪವಿತ್ರ ಧರ್ಮ ಗ್ರಂಥ. ಪ್ರತಿಯೊಬ್ಬ ಹಿಂದೂ ಈ ಧರ್ಮ ಗ್ರಂಥಕ್ಕೆ ತಲೆ ಬಾಗಲೇ ಬೇಕು. ಈ ಗ್ರಂಥದಲ್ಲಿ ಸಮಾಜಕ್ಕೆ ನೀಡುವ ಉತ್ತಮ ಸಂದೇಶಗಳು ಉಲ್ಲೇಖವಿದೆ. ಭಗವದ್ಗೀತೆಯ ಸಂದೇಶಗಳನ್ನು ಜನರಿಗೆ ಸಾರುವುದು ಪ್ರತಿಯೊಬ್ಬ ಮಠಾದೀಶರ ಧರ್ಮ ಎಂದರು.