ಬೆಳ್ಮಣ್, ಜು 21 (Daijiworld News/MSP): ಇನ್ನಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಜರಕಟ್ಟೆಯಲ್ಲಿ ಕಾರ್ಯಚರಿಸುತ್ತಿದ್ದ ಗೋಣಿಚೀಲ ತಯಾರಿಕ ಕಂಪನಿಯ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕಂಪನಿ ಹಾಗೂ ಸಮೀಪದ ಹೋಟೆಲ್ ಅಂಗಡಿಗಳನ್ನು ಸೀಲ್ ಡೌನ್ ಮಾಡಲಾದ ಘಟನೆ ಮಂಗಳವಾರ ನಡೆದಿದೆ.

ಗೋಣಿಚೀಲ ತಯಾರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರಿಗೆ ಕೋವಿಡ್ -19 ಪರೀಕ್ಷೆ ವರದಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕಂಪನಿಯನ್ನು ಸೀಲ್ ಡೌನ್ ಮಾಡಲಾಗಿದೆ. ಕಂಪನಿಯ ಕೆಲಸದಲ್ಲಿದ್ದ ಬೆಳ್ಮಣ್ ಮೂಲದ ಒಬ್ಬರಿಗೆ ಹಾಗೂ ಅಡ್ವೆಯ ಇಬ್ಬರಿಗೆ ಹಾಗೂ ಪಡುಬಿದ್ರೆಯ ಒಬ್ಬರಿಗೆ ಸೋಂಕು ದೃಢವಾಗಿದ್ದು ಮುಂಜಾಗ್ರತಾ ಕ್ರಮವಾಗಿ ಕಂಪನಿಯ ಸಹಿತ ಸಮೀಪದಲ್ಲಿದ್ದ ಒಂದು ಹೋಟೆಲ್ ಹಾಗೂ 4 ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.