ಸುಳ್ಯ, ಏ 16 : ಸುಳ್ಯದಲ್ಲಿ ಕಾಂಗ್ರೆಸ್ ಶಾಸಕರಿದ್ದಾಗ ಕೋಮು ಗಲಭೆಯಾಗಿತ್ತು. ಅಂಗಾರರು ಶಾಸಕರಾದ ಮೇಲೆ ಇಲ್ಲಿ ಕೋಮುಗಲಭೆ ನಡೆಯಲಿಲ್ಲ ಎಂದು ಬಿ.ಜೆ.ಪಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಶ್ರಫ್ ಖಾಸಿಲೆ ಹೇಳಿದರು.
ಅವರು ಸುಳ್ಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಇದುವರೆಗೆ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ಮಾಡಿಕೊಳ್ಳಲು ಪೊಳ್ಳು ಆಶ್ವಾಸನೆಗಳನ್ನು ನೀಡಿ ದುರ್ಬಳಕೆ ಮಾಡಿಕೊಂಡಿದೆ. ಸಿದ್ಧರಾಮಯ್ಯ ಸರಕಾರ ಅಲ್ಪಸಂಖ್ಯಾತರನ್ನು ವಂಚಿಸಿದೆ. ಅಲ್ಪಸಂಖ್ಯಾತ ಮಹಿಳೆ ಯರಿಗೆ ಶ್ರಮಶಕ್ತಿ ಯೋಜನೆಯಲ್ಲಿ ಸ್ವ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದ್ದು, ಸುಳ್ಯದಲ್ಲಿ ಸುಮಾರು 1500 ಮಂದಿ ಆರ್ಜಿ ಸಲ್ಲಿಸಿದ್ದರೂ ಇದುವರೆಗೆ ಒಂದೇ ಒಂದು ಫಲಾನುಭವಿಗೂ ಸಾಲ ಸೌಲಭ್ಯ ನೀಡಲಿಲ್ಲ. ಅಲ್ಪ ಸಂಖ್ಯಾತರನ್ನು ಮೆಚ್ಚಿಸುವುದಕ್ಕಾಗಿ ಮುಸ್ಲಿಂ ಗಲಭೆಕೋರರಿಗೆ ಪ್ರೋತ್ಸಾಹ ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಠಿಸಿದೆ. ಸಮಾಜಕ್ಕೆ ಮಾರಕವಾದ ವ್ಯಕ್ತಿಗಳಿಗೆ ಸಹಕಾರ ನೀಡಿದೆಯೇ ಹೊರತು ನಿಜವಾದ ಬಡ ಮುಸ್ಲಿಂ ಮರಿಗೆ ಈ ಸರಕಾರ ಏನೂ ಸಹಾಯ ಮಾಡಲಿಲ್ಲ ಎಂದ ಅವರು ಕರ್ನಾಟಕದಲ್ಲಿ ವಕ್ಫ್ ಮಂಡಳಿಯ ಲಕ್ಷಾಂತರ ಕೋಟಿ ಆಸ್ತಿಯ ಹಗರಣವಾಗಿ ದೆಯೆಂದು ಮಂಡಳಿ ಅಧ್ಯಕ್ಷರು ವರದಿ ನೀಡಿದ್ದರೂ ಸಿದ್ಧರಾಮಯ್ಯ ಸರಕಾರ ಅದನ್ನು ಮುಟ್ಟಿಯೂ ನೋಡಲಿಲ್ಲ. ಒಂದು ವೇಳೆ ಆ ವರದಿ ಬಹಿರಂಗಗೊಂಡಿರೆ ಕಾಂಗ್ರೆಸ್ನ ಅನೇಕ ಮುಸ್ಲಿಂ ನಾಯಕರು ಜೈಲಿಗೆ ಹೋಗಬೇಕಾದಿತ್ತು. ತ್ರಿವಳಿ ತಲಾಖ್ನಂತಹ ಅನಿಷ್ಠ ಪದ್ಧತಿಯನ್ನು ನಿಷೇಧ ಮಾಡಿ ಮುಸ್ಲಿಂ ಮಹಿಳೆಯರನ್ನು ಬಿ.ಜೆ.ಪಿ ರಕ್ಷಣೆ ಮಾಡಿದೆ. 94ಸಿಯಲ್ಲಿ ಕಾಂಗ್ರೆಸ್ ಸರಕಾರ ಹಣ ಮಾಡುವ ದಂಧೆ ಮಾಡಿದೆ. ಈ ಬಾರಿ ಕಾಂಗ್ರೆಸ್ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ಇದೆಯೆಂದು ಭಾವಿಸುವುದು ಬೇಡ. ನಾವು ಮನೆ ಮನೆ ಹೋಗಿ ಕಾಂಗ್ರೆಸ್ನ ವಂಚನೆಯನ್ನು ತಿಳಿಸಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯ ದರ್ಶಿ ಇಲ್ಯಾಸ್, ಸುನಿತಾ ಮೊಂತೆರೋ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಉಪಸ್ಥಿತರಿದ್ದರು.