ಉಡುಪಿ, ಜು. 22 (DaijiworldNews/MB) : ಜಿಲ್ಲೆಯಲ್ಲಿ ಜುಲೈ 22ರ ಬುಧವಾರದಿಂದ ಮತ್ತೆ ಬಸ್ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ನೀಡಿದ್ದರು. ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಬಸ್ಗಳು ಮಾತ್ರ ಸಂಚಾರ ಆರಂಭಿಸಿದೆ.




ಉಡುಪಿ ಹಾಗೂ ಮಂಗಳೂರು ನಡುವಿನ ಬಸ್ಗಳು ಕೂಡಾ ಸಂಚಾರ ಆರಂಭಿಸಿದೆ. ಆದರೆ ಬೆಳಗ್ಗೆಯೇ ಬಸ್ನಲ್ಲಿ ಪ್ರಯಾಣಿಕರು ಇಲ್ಲದೇ ಬಸ್ ಖಾಲಿಯಾಗಿ ಓಡಾಟ ನಡೆಸುತ್ತಿರುವ ದೃಶ್ಯ ಕಂಡು ಬಂದಿದೆ. ಈಗಾಗಲೇ ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ಆರಂಭಿಸಿದೆ. ಆದರೆ ಉಡುಪಿಯ ಸಿಟಿ ಬಸ್ಗಳು ಇನ್ನು ಕೂಡಾ ಸಂಚಾರ ಆರಂಭಿಸಿಲ್ಲ.
ಈ ಬಗ್ಗೆ ದಾಯ್ಜಿವಲ್ಡ್ ವಾಹಿನಿಗೆ ಮಾಹಿತಿ ನೀಡಿದ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್ ಅವರು, ''ಖಾಸಗಿ ಬಸ್ಗಳು ಸಂಚಾರ ಆರಂಭಿಸಿಲ್ಲ. ಸಭೆ ಸೇರಿ ಬಸ್ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಎಲ್ಲಾ ಬಸ್ಗಳನ್ನು ಆರಂಭಿಸಲು ಸಾಧ್ಯವಿಲ್ಲ. ಈಗಾಗಲೇ ಸಾಮಾಜಿಕ ಅಂತರದೊಂದಿಗೆ ಶೇ.50 ರಷ್ಟು ಬಸ್ಗಳ ಸಂಚಾರಿಸಬೇಕು ಎಂದು ತಿಳಿಸಿದ್ದಾರೆ. ಕೆಲವೊಂದು ಗೊಂದಲಗಳು ಇರುವ ಹಿನ್ನಲೆ ನಾಳೆಯೊಳಗಾಗಿ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗುವುದು. ಶುಕ್ರವಾರ ಅಥವಾ ಶನಿವಾರ ಬಸ್ ಸಂಚಾರ ಮಾಡುವ ಸಾಧ್ಯತೆಯಿದೆ'' ಎಂದು ತಿಳಿಸಿದ್ದಾರೆ.
''ಇನ್ನು ಕೆಲವು ತಾಂತ್ರಿಕ ಸಂಸ್ಯೆಗಳು ಉಂಟಾಗಿದೆ. ನಮ್ಮ ಬಸ್ ಸಂಚರಿಸದಿದ್ದರೂ ಕೂಡಾ ತೆರಿಗೆ ಕಟ್ಟಬೇಕಾಗುತ್ತದೆ. ಕೆಎಸ್ಆರ್ಟಿಸಿ ಬಸ್ಗಳಿಗೆ ಈ ಸಮಸ್ಯೆಯಿಲ್ಲ. ಈ ಎಲ್ಲಾ ತಾಂತ್ರಿಕ ವಿಷಯಗಳಿಂದಾಗಿ ನಾವು ಇನ್ನೆರಡು ದಿನದಲ್ಲಿ ಆರಂಭಿಸಲಾಗುವುದು'' ಎಂದು ಹೇಳಿದ್ದಾರೆ.