ಮೂಡುಬಿದಿರೆ, ಜು. 22 (DaijiworldNews/MB) : ಇತ್ತೀಚೆಗೆ ಹಲವು ಕಡೆಗಳಲ್ಲಿ ಕೊರೊನಾ ವಾರಿಯರ್ಸ್ ಕಿಲೋಮೀಟರ್ ಗಟ್ಟಲೆ ನಡೆದು ಬಂದ ಘಟನೆಗಳ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ಗೆ ನೆರವು ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ತನ್ನ ಎರಡು ಕಾರುಗಳನ್ನು ಕೂಡಾ ಕೊರೊನಾ ವಾರಿಯರ್ಸ್ಗಳ ಸಹಾಯಕ್ಕಾಗಿ ನೀಡಿದ್ದಾರೆ.



ಸಾರ್ವಜನಿಕ ವಾಹನಗಳು ಇಲ್ಲದ ಕಾರಣದಿಂದಾಗಿ ಮೂಡುಬಿದಿರೆಯಲ್ಲಿ ಕೊರೊನಾ ವಾರಿಯರ್ಸ್ಗಳಾದ ನರ್ಸ್ಗಳು, ವೈದ್ಯರುಗಳಿಗೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ಬಗ್ಗೆ ತಿಳಿದ ಅಭಯಚಂದ್ರ ಜೈನ್ ಅವರು ತಮ್ಮ ಎರಡು ಕಾರುಗಳನ್ನು ಮೂಡುಬಿದಿರೆಯ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಿದ್ದಾರೆ.
ಜೈನ್ ಕಳೆದ 15 ದಿನಗಳಿಂದ ಮತ್ತು ಮಾರ್ಚ್ನಲ್ಲಿ ಲಾಕ್ ಡೌನ್ ಸಮಯದಲ್ಲಿ ತನ್ನ ಕಾರುಗಳನ್ನು ಕೊರೊನಾ ವಾರಿಯರ್ಸ್ಗೆ ನೀಡಿದ್ದರು.