ಕೋಟ, ಜು 22 (Daijiworld News/MSP): ಕೊರೊನಾ ಮಹಾವೈರಸ್ ಖಾಯಿಲೆಯಿಂದ ಕಂಗೆಟ್ಟ ಜನಸಾಮಾನ್ಯರು ಆಸ್ಪತ್ರೆ ಗೆ ಅಲೆದಾಡಲು ದೂರ ಕ್ರಮಿಸಬಾರದೆಂಬ ತುಡಿತದೊಂದಿಗೆ ಜಿಲ್ಲಾಡಳಿತ ನಿರ್ದೇಶದಂತೆ ಗ್ರಾಮೀಣ ಭಾಗದ ಒಳ ಪ್ರದೇಶದಲ್ಲಿ ಗ್ರಾಮ ಆರೋಗ್ಯ ಸೇವಾ ಕೇಂದ್ರ ಸ್ಥಾಪಿಸಲು ಆಯಾ ಗ್ರಾಮಪಂಚಾಯತ್ ಗಳಿಗೆ ನಿರ್ದೇಶನ ನೀಡಿದೆ.



ಅದರಂತೆ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮೊಟ್ಟಮೊದಲ ಬಾರಿಗೆ ಕೋಟತಟ್ಟು ಪಡುಕರೆ ಸರಕಾರಿ ಪ್ರಾಥಮಿಕ ಶಾಲಾ ಅಂಗನವಾಡಿ, ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಗಿಳಿಯಾರು ಗ್ರಾಮದ ಸತೀಶ್ ಹೆಗ್ಡೆ ಗೃಹ ಹಾಗೂ ಮೂಡುಗಿಳಿಯಾರು ಶಾಲಾ ಅಂಗನವಾಡಿಯಲ್ಲಿ ಒಟ್ಟುಮೂರು ಕಡೆಗಳಲ್ಲಿ ಸ್ಥಳೀಯ ದಾನಿಗಳಾದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹಾಗೂ ಮೂಡುಗಿಳಿಯಾರಿನಲ್ಲಿ ಉದ್ಯಮಿ ಸುಭಾಷ್ ಶೆಟ್ಟಿ ನೆರವಿನೊಂದಿಗೆ ಸೇವಾ ಕೇಂದ್ರದ ಉಪಕರಣ ಪಡೆಯಲಾಗಿದ್ದು ಬುಧವಾರ ಉಡುಪಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೇಹಲೋಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್,ಸದಸ್ಯೆ ಲಲಿತಾ ,ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಕೋಟತಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಧಿಕಾರಿ ಶೈಲಜಾ ಪೂಜಾರಿ,ಅಂಗನವಾಡಿ ಸಿ.ಡಿ.ಪಿ.ಓ ಶೋಭಾ ಶೆಟ್ಟಿ, ಕೋಟ ಗ್ರಾಮಲೆಕ್ಕಿಗ ಚಲುವರಾಜು,ಸಹಾಯಕ ರಾಜು,ಕೋಟ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ವನೀತಾ ಶ್ರೀಧರ್ ಆಚಾರ್ಯ, ಕೋಟತಟ್ಟು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ರಘು ತಿಂಗಳಾಯ,ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು,ಆಶಾ ಕಾರ್ಯಕರ್ತೆಯರು,ಮಾಜಿ ಪಂಚಾಯತ್ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ವಿಶ್ವನಾಥ್ ಕಾರ್ಯಕ್ರಮ ನಿರ್ವಹಿಸಿದರು.