ಕಡಬ, ಜು 22 (DaijiworldNews/PY): ಏನೆಕಲ್ಲು ದೇವರಗುಂಡಿಯಿಂದ ಮೀನು ಹಿಡಿಯುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.


ಆರೋಪಿಗಳನ್ನು ಸವಣೂರಿನ ಬಶೀರ್, ಅಬ್ದುಲ್ ರಜಾಕ್, ಬಶೀರ್ ಹಾಗೂ ಅಬ್ದುಲ್ ಸಮಾದ್ ಎನ್ನಲಾಗಿದೆ.
ನಾಲ್ವರು ಆರೋಪಿಗಳ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.