ಬೆಳ್ಮಣ್, ಜು 22 (DaijiworldNews/PY): ಮಾಜಿ ತಾಲೂಕು ಪಂಚಾಯತಿ ಸದಸ್ಯ ಹಾಗೂ ಹೊಟೇಲ್ ಉದ್ಯಮಿಯೊಬ್ಬರಿಗೆ ಕಳೆದೆರಡು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು ಇದೀಗ ಆತನ ಪತ್ನಿ ಹಾಗೂ ಮಗಳಿಗೂ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ಮಾಜಿ ತಾಲೂಕು ಪಂಚಾಯತಿ ಸದಸ್ಯ ಹಾಗೂ ಹೋಟೆಲ್ ಉದ್ಯಮಿಗೆ ಪಾಸಿಟಿವ್ ವರದಿ ದೃಢವಾದ ಹಿನ್ನಲೆಯಲ್ಲಿ ಬೆಳ್ಮಣ್ನಲ್ಲಿ ಅವರು ನಡೆಸುತ್ತಿದ್ದ ಹೊಟೇಲ್ ಹಾಗೂ ಅವರ ವಾಸದ ಬಾಡಿಗೆ ಮನೆಯ ಸಹಿತ ಸುಮಾರು 15 ಮನೆ ಹಾಗೂ 30 ಅಂಗಡಿ ಹಾಗೂ ಎರಡು ಬ್ಯಾಂಕ್ಗಳನ್ನು ಸೀಲ್ ಡೌನ್ ಮಾಡಲಾಗಿತ್ತು.
ಆ ಬಳಿಕ ಮನೆಯವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ಇದೀಗ ಅವರ ಪತ್ನಿ ಹಾಗೂ ಮಗಳಿಗೂ ಸೋಂಕು ಇರುವುದು ದೃಢವಾಗಿದೆ. ಇದೀಗ ಒಂದೇ ಮನೆಯ ಮೂವರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು ಬೆಳ್ಮಣ್ ಗ್ರಾಮದ ಜನರನ್ನು ಚಿಂತಿಗೀಡು ಮಾಡಿದೆ.