ಮಂಗಳೂರು, ಜು. 22 (DaijiworldNews/SM): ದ.ಕ. ಜಿಲ್ಲೆಯಲ್ಲಿ ಬುಧವಾರ ಮತ್ತೆ 162 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3996ಕ್ಕೆ ಏರಿಕೆಯಾಗಿದೆ.

ಇನ್ನು ಜಿಲ್ಲೆಯಲ್ಲಿ ಮತ್ತೆ 69 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆ ಮೂಲಕ ಒಟ್ಟು 1744 ಮಂದಿ ಕೊರೊನಾದಿಂದ ಗುಣಮುಖರಾದಂತಾಗಿದೆ. ಸದ್ಯ 2160 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಪ್ರಾಥಮಿಕ ಸಂಪರ್ಕದಿಂದ 13 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 70 ಐ ಎಲ್ ಐ, 18 ಸಾರಿ ಪ್ರಕರಣಗಳಾಗಿದೆ. ಅಂತರಾಜ್ಯ ಪ್ರಯಾಣದಿಂದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು 60 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಮತ್ತೆ ಐವರು ಸೋಂಕಿಗೆ ಬಲಿ:
ಇನ್ನು ಜಿಲ್ಲೆಯಲ್ಲಿ ಬುಧವಾರದಂದು ಮತ್ತೆ ಐವರು ಸೋಂಕಿಗೆ ಬಲಿಯಾಗಿದ್ದಾರೆ.
ಮಂಗಳೂರು ಮೂಲದ 60 ವರ್ಷದ ಮಹಿಳೆ, ಪುತ್ತೂರು ನಿವಾಸಿ 70 ವರ್ಷದ ಮಹಿಳೆ, ಮಂಗಳೂರು ನಿವಾಸಿ 75 ವರ್ಷದ ಮಹಿಳೆ, ದಾವಣಗೆರೆ ನಿವಾಸಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 54 ವರ್ಷದ ವ್ಯಕ್ತಿ, ಮಂಗಳೂರು ನಿವಾಸಿ 66 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.