ಕಾಸರಗೋಡು, ಜು. 22 (DaijiworldNews/SM): ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನ 100 ರ ಗಡಿ ದಾಟಿದೆ. ಬುಧವಾರ 101 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 89 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.

ಇದಲ್ಲದೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದೆ. ಬುಧವಾರ ದೃಢಪಟ್ಟ 101 ಮಂದಿಯಲ್ಲಿ ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 40 ಮಂದಿಗೆ ಸೋಂಕು ದೃಢಪಟ್ಟಿದೆ. ಕುಂಬ್ಡಾಜೆ 15, ಬದಿಯಡ್ಕ 11, ಪನತ್ತಡಿ, ಚೆಂಗಳ ತಲಾ 4, ಪಡನ್ನ, ಕಳ್ಳಾರ್ ತಲಾ 3, ನೀಲೇಶ್ವರ, ಮಧೂರು, ಈಸ್ಟ್ ಎಳೇರಿ, ಚೆಮ್ನಾಡ್ ತಲಾ 2, ಮಂಗಲ್ಪಾಡಿ, ಮೊಗ್ರಾಲ್ ಪುತ್ತೂರು, ಮಂಜೇಶ್ವರ, ಕಾಸರಗೋಡು, ಕಾಞ0ಗಾಡ್, ಪುತ್ತಿಗೆ, ಉದುಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದ್ರಢಪಟ್ಟಿದೆ. ಸೋಂಕಿತರಲ್ಲಿ 10 ವರ್ಷ ಕೆಳಗಿನ ಆರು ಮಕ್ಕಳು ಒಳಗೊಂಡಿದ್ದಾರೆ.
ಪ್ರಾಥಮಿಕ ಸಂಪರ್ಕದಿಂದ 89 ಮಂದಿಗೆ ಸೋಂಕು ದ್ರಢಪಟ್ಟಿದೆ. ಬುಧವಾರ 43 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಫೆಬ್ರವರಿ ಮೂರರಂದು ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಕೋವಿಡ್ ಸೋಂಕು ಪತ್ತೆಯಾಗಿತ್ತು. ಚೀನಾದ ವುಹಾನ್ ನಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ ಮಾರ್ಚ್ 17 ಎರಡನೇ ಸೋಂಕು ಪತ್ತೆಯಾಗಿತ್ತು. ಮಾರ್ಚ್ 20ರ ಬಳಿಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿತು.
ಮಾರ್ಚ್ 23 19, 27ರಂದು 33 ಮಂದಿಗೆ ಸೋಂಕು ದೃಢಪಟ್ಟಿತ್ತು. ಮೇ ಒಂದರಂದು ಜಿಲ್ಲೆಯೂ ಸಂಪೂರ್ಣ ಸೋಂಕು ಮುಕ್ತವಾಗಿತ್ತು. ಎಲ್ಲಾ 178 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಮೇ 11ರಿಂದ ಮೂರನೇ ಹಂತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಸಾಗುತ್ತಿದೆ.
ಜುಲೈ 10 ರ ಬಳಿಕ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಾ ಬಂದಿದೆ. ಮಂಗಳವಾರ 40 ಮಂದಿಗೆ ಬುಧವಾರ 101 ಮಂದಿಗೆ ಸೋಂಕು ದೃಢ ಪಟ್ಟಿದೆ. ಜುಲೈ 17ರಂದು 74 ಮಂದಿಗೆ ಈ ಹಿಂದೆ ಒಂದೇ ದಿನ ಅತೀ ಹೆಚ್ಚು ಸೋಂಕು ದೃಢಪಟ್ಟಿತ್ತು. ಬಳಿಕ ಇಂದು ನೂರರ ಗಡಿ ದಾಟಿದೆ. ಮೊದಲ ಹಾಗೂ ಎರಡನೇ ಹಂತದಲ್ಲಿ ಒಟ್ಟು 178 ಸೋಂಕಿತರಿದ್ದ ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ 895 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ ಸಂಪರ್ಕದಿಂದ 400 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1073 ಕ್ಕೆ ತಲಪಿದೆ. ಜಿಲ್ಲೆಯಲ್ಲಿ 487 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ 585 ಮಂದಿ ಗುಣಮುಖರಾಗಿದ್ದಾರೆ. ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ 132, ಚೆಂಗಳ 127, ಕಾಸರಗೋಡು ನಗರಸಭೆಯ 87, ಚೆಮ್ನಾಡ್ ಪ್ರದೇಶದ 76, ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 74 ಮಂದಿ ಸೋಂಕಿತರರಿದ್ದಾರೆ.