ಉಳ್ಳಾಲ, ಜು. 22 (DaijiworldNews/SM): ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ಹಾಗೂ ಮೂವರು ವೈದ್ಯರಿಗೆ ಸೇರಿದಂತೆ ಉಳ್ಳಾಲ ಆಸುಪಾಸಿನಲ್ಲಿ ಬುಧವಾರ 18 ಮಂದಿಯಲ್ಲಿ ಸೋಂಕು ದೃಢವಾಗಿದೆ.

ದೇರಳಕಟ್ಟೆ ಖಾಸಗಿ ಆಸ್ಪತ್ರೆ ಸಿಬ್ಬಂದಿ 23 ವರ್ಷದ ಮಹಿಳೆ, 43 ವರ್ಷದ ಪುರುಷ, 22 ವರ್ಷದ ಮಹಿಳೆ, 22ರ ಮಹಿಳೆ, ಖಾಸಗಿ ಆಸ್ಪತ್ರೆ ವೈದ್ಯರುಗಳಾದ 50ರ ಮಹಿಳೆ, 27ರ ಮಹಿಳೆ, 23ರ ಮಹಿಳಾ ವೈದ್ಯೆ, ಉಳ್ಳಾಲದ 30ರ ಪುರುಷ, ಮುನ್ನೂರು ಮದನಿನಗರ 22 ಮಹಿಳೆ, ಉಳ್ಳಾಲ ಮೊಗವೀರಪಟ್ನದ 61ರ ಪುರುಶ, 22ರ ಮಹಿಳೆ, ಮಂಜನಾಡಿ ಕಲ್ಕಟ್ಟದ 28ರ ಪುರುಷ, ತಲಪಾಡಿ ಸೋಮೇಶ್ವರದ 36ರ ಮಹಿಳೆ, ಕುತ್ತಾರು ಸಿಲಿಕೋನಿಯದ 22ರ ಪುರುಷ, ಕುಂಪಲದ 20ರ ಮಹಿಳೆ, ಉಳ್ಳಾಲದ 45ರ ಪುರುಶ, ಕೊಲ್ಯ ಕುಜುಮಗದ್ದೆ 55ರ ಮಹಿಳೆ, ಮೊಗವೀರಪಟ್ನದ 57ರ ಪುರುಷ- ಇವರಲ್ಲಿ ಸೋಂಕು ದೃಢವಾಗಿದೆ.
ಮಂಗಳವಾರ 20 ಮಂದಿಯಲ್ಲಿ ಸೋಂಕು:
ದೇರಳಕಟ್ಟೆಯ ಏಳು ತಿಂಗಳ ಮಗು ಸಹಿತ ಖಾಸಗಿ ಆಸ್ಪತ್ರೆಯ ಮೂವರು ವೈದ್ಯರು ಮತ್ತು ಏಳು ಮಂದಿ ಸಿಬ್ಬಂದಿಗಳಿಗೆ ಸೇರಿದಂತೆ ಉಳ್ಳಾಲ ವ್ಯಾಪ್ತಿಯಲ್ಲಿ ಮಂಗಳವಾರ ಒಟ್ಟು 20 ಮಂದಿಗೆ ಸೋಂಕು ದೃಢವಾಗಿದೆ. ಕೊರೊನ ಹಾಟ್ಸ್ಪಾಟ್ ಆಗಿರುವ ಉಳ್ಳಾಲ ಹಳೆಕೋಟೆ ಪೂಜಾರಿಬೈಲ್, ಪೆರ್ಮನ್ನೂರು ನಿತ್ಯಾನಂದ ನಗರದಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದ್ದು, ದೇರಳಕಟ್ಟೆಯ ಏಳು ತಿಂಗಳ ಮಗು, ಖಾಸಗಿ ಆಸ್ಪತ್ರೆಯ ಏಳು ಮಂದಿ ಸಿಬ್ಬಂದಿಗಳಿಗೆ, ಮೂವರು ವೈದ್ಯರಿಗೆ ಸೋಂಕು ದೃಢವಾಗಿದ್ದು, ಪಜೀರು ವೈದ್ಯನಾಥ ನಗರದ ಬಾಲಕ ಸಹಿತ ಮಹಿಳೆಗೆ, ದೇರಳಕಟ್ಟೆ ಶಾಂತಿಭಾಗ್ನ ವೃದ್ದರೊಬ್ಬರಿಗೆ, ಸೋಮೇಶ್ವರದ ಯುವತಿಗೆ, ತಲಪಾಡಿ ತೂಮಿನಾಡು ಯುವತಿ ತಲಪಾಡಿ ಕಿನ್ಯಾದ ವೃದ್ದರೊಬ್ಬರಿಗೆ ಮತ್ತು ಕೊಣಾಜೆ ಅಸೈಗೋಳಿ ಮಹಿಳೆಗೆ ಸೋಂಕು ದೃಢವಾಗಿದೆ.