ಪಡುಬಿದ್ರಿ, ಜು 23 (Daijiworld News/MSP): ಪರವಾನಗಿ ಇಲ್ಲದೆ ತೆಂಕ ಎರ್ಮಾಳ್ ಎಂಬಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ನಡೆಸುತ್ತಿದ್ದ ಮನೆ ಮೇಲೆ ಗುರುವಾರ ಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಲಾಗಿದೆ.

ಈ ಪೈಕಿ ಮುಖ್ಯ ಆರೋಪಿ ಕಮಲ್ ಸಾಹೇಬ್ ತಪ್ಪಿಸಿಕೊಂಡಿದ್ದು, ಆತನ ಅಳಿಯ ನಾಸಿರ್, ಮೊಮ್ಮಗ ಜಮೀರ್ ಮತ್ತು ಇನ್ನೋರ್ವ ಆರೋಪಿ ಸದ್ದಾಂ ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಮನೆಯಲ್ಲಿಯೇ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ. ಸ್ಥಳದಿಂದ ಮೂರು ದನಗಳನ್ನು ಮತ್ತು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.