ಉಡುಪಿ, ಜು. 23 (DaijiworldNews/MB) : ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಹನ್ನೆರಡಕ್ಕೆ ಏರಿಕೆಯಾಗಿದೆ.



ಅಸ್ತಮಾ, ಶೀತ-ಜ್ವರದಿಂದ ಕೆಲ ಸಮಯದಿಂದ ಬಳಲುತಿದ್ದ ಚಾಂತಾರುವಿನ 70 ವರ್ಷದ ವೃದ್ದೆ ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ.
ನಿನ್ನೆಯಷ್ಟೇ ಗಂಟಲು ದ್ರವದ ಮಾದರಿಯ ಪರೀಕ್ಷೆಯಲ್ಲಿ ವೃದ್ದೆಗೆ ಕೊರೊನಾ ಇರುವುದು ದೃಢಪಟ್ಟಿದ್ದು ಆಸ್ಪತ್ರೆಗೆ ಸೇರಿಸುವ ಸಿದ್ಧತೆ ನಡೆಯುತಿದ್ದಂತೆ ವೃದ್ಧೆ ಮನೆಯಲ್ಲೇ ಸಾವನ್ನಪ್ಪಿದ್ದಾರೆ.
ಉಡುಪಿಯಲ್ಲಿ ಬುಧವಾರ ಒಂದು ದಿನವೇ 281 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 2686ಕ್ಕೆ ಏರಿಕೆಯಾಗಿದೆ.