ಮಂಗಳೂರು, ಜು. 23 (DaijiworldNews/MB) : ದುಬೈನ ಶೇಖ್ ಜಾಯೆದ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಮಂಗಳೂರಿನ ಯುವತಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.



ಮಂಗಳೂರಿನ ವೆಲೇನ್ಸಿಯಾ ಮೂಲದ ಲುಧಿನಾ ಮೊಂತೇರೋ (30) ಮೃತರಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ.
ಜುಲೈ 12 ರಂದು ತನ್ನ ಕಂಪನಿ ಬಸ್ನಲ್ಲಿ ಯುವತಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಈ ಸಂದರ್ಭ 14 ಜನರು ಈ ಬಸ್ನಲ್ಲಿ ಇದ್ದು ಇಬ್ಬರು ಸಾವನ್ನಪ್ಪಿದರೆ 12 ಮಂದಿ ಗಾಯಗೊಂಡಿದ್ದಾರೆ.
ಬಸ್ ಅಲ್ ಮನಾರಾ ಸೇತುವೆಯಲ್ಲಿ ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿ ಆಗಿದ್ದು ಬಸ್ಗೆ ಬೆಂಕಿ ಹತ್ತಿಕೊಂಡಿದೆ. ಈ ಸಂದರ್ಭದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ.
ಲುಧಿನಾ ಅವರು ಲೂಯಿಸ್ ಮತ್ತು ದಿವಂಗತ ಥೆರೆಸಾ ಮೊಂತೇರೋ ಅವರ ಮಗಳು ಹಾಗೂ ಲೌಸನ್ ಮತ್ತು ಬ್ಲಾಡಿನಾ ಅವರು ಸಹೋದರಿಯಾಗಿದ್ದಾರೆ.