ಬೆಳ್ಮಣ್, ಜು 23 (Daijiworld News/MSP): ಮುಂಬೈಯಿಂದ ಆಗಮಿಸಿದ್ದ ಬೆಳ್ಮಣ್ ನ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

ಇತ್ತೀಚೆಗೆ ಮುಂಬೈಯಿಂದ ಆಗಮಿಸಿ ಬೆಳ್ಮಣ್ ನಲ್ಲಿ ಹೋಂ ಕ್ವಾರೆಂಟೈನಲ್ಲಿದ್ದ ಒಂದೇ ಕುಟುಂಬದ ನಾಲ್ಕು ಮಂದಿ ಸದಸ್ಯರಿಗೆ ಕೋವಿಡ್ -19 ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ.
ಆರು ಹಾಗೂ ಹತ್ತು ವರ್ಷದ ಮಕ್ಕಳ ಸಹಿತ ಒಟ್ಟು ನಾಲ್ಕು ಮಂದಿಯಲ್ಲಿ ಸೋಂಕು ಇರುವುದು ದೃಢವಾಗಿದೆ.
ಬುಧವಾರ ತಾನೇ ಹಿಂದೆ ಸೋಂಕು ಕಾಣಿಸಿಕೊಂಡಿದ್ದ ಮಾಜಿ ಜಿ.ಪಂ ಮನೆಯ ಇಬ್ಬರು ಸದಸ್ಯರಿಗೆ ಹಾಗೂ ಕಾಂಜರಕಟ್ಟೆಯ ಗೋಣಿ ಚೀಲ ಕಾರ್ಖಾನೆಯ ಕಾರ್ಮಿಕನಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು.