ಬೆಳ್ತಂಗಡಿ,ಜು 24 (Daijiworld News/MSP): ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧ ತಾಲೂಕಿನ ಪುಣ್ಯಕ್ಷೇತ್ರವಾದ ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿಯ ದೇವಸ್ಥಾನದಿಂದ ಪವಿತ್ರ ಮಣ್ಣು ಮತ್ತು ನೇತ್ರಾವತಿ ನದಿಯ ಜಲವನ್ನು ಸಂಗ್ರಹಿಸಲಾಯಿತು.

ಇದನ್ನು ರಾಮಮಂದಿರ ಶಂಕುಸ್ಥಾಪನೆ ಸಂದರ್ಭ ಬಳಸಲಿದ್ದು ಅದನ್ನು ಅಯೋಧ್ಯೆಗೆ ಕಳುಹಿಸುವ ನಿಮಿತ್ತ ಜು.21ರಂದು ವಿಶ್ವಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರಿಂದ ಧರ್ಮಸ್ಥಳ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಡಿ ಪವಿತ್ರ ಮಣ್ಣು ಮತ್ತು ಜಲವನ್ನು ಸಂಗ್ರಹಿಸಿ ಅಯೋಧ್ಯೆಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ, ವಿಶ್ವ ಹಿಂದೂಪರಿಷತ್ ಬೆಳ್ತಂಗಡಿ ಪ್ರಖಂಡದ ಉಪಾಧ್ಯಕ್ಷ ಶ್ರೀಧರ್ ಗುಡಿಗಾರ್, ವಿಶ್ವಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಕಾರ್ಯದರ್ಶಿ ಮೋಹನ್ ಕೆ, ಬಜರಂಗದಳ ಬೆಳ್ತಂಗಡಿ ಪ್ರಖಂಡ ಸಂಯೋಜಕ ಸಂತೋಷ್ ಅತ್ತಾಜೆ, ಸಹ ಸಂಯೋಜಕ ರಮೇಶ್ ಧರ್ಮಸ್ಥಳ, ಗಣೇಶ್ ಕಳೆಂಜ, ತಾಲೂಕು ಗೋ ರಕ್ಷಾ ಪ್ರಮುಖರಾದ ದಿನೇಶ್ ಚಾರ್ಮಾಡಿ, ವಿಶ್ವ ಹಿಂದೂ ಪರಿಷತ್ ಉಜಿರೆ ಗ್ರಾಮ ಸಮಿತಿ ಮುಂಡತ್ತೋಡಿ ಅಧ್ಯಕ್ಷ ಪ್ರಶಾಂತ್, ಕೃಷ್ಣ ಧರ್ಮಸ್ಥಳ, ಗ್ರಾ.ಪಂ ಸದಸ್ಯ ದಿವಾಕರ ಉಜಿರೆ ಉಪಸ್ಥಿತರಿದ್ದರು.