ಮಂಗಳೂರು, ಜು 24 (DaijiworldNews/PY): ಜುಲೈ 24ರ ಶುಕ್ರವಾರದಿಂದ ಮುಂಬೈಯಿಂದ ಮಂಗಳೂರಿಗೆ ಇಂಡಿಗೊ ವಿಮಾನಗಳು ಹಾರಾಟ ನಡೆಸಲಿವೆ.

ಇಂಡಿಗೊ ವಿಮಾನಗಳು ವಾರದ ನಾಲ್ಕು ದಿನ ಅಂದರೆ, ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಕಾರ್ಯಾಚರಣೆ ನಡೆಸಲಿವೆ.
ವಿಮಾನ ಹಾರಾಟದ ವೇಳಾಪಟ್ಟಿ ಹೀಗಿದ್ದು, ಮುಂಬೈಯಿಂದ 9.30ಕ್ಕೆ ವಿಮಾನ ಹಾರಾಟ ಆರಂಭಿಸಲಿದೆ. ಬೆಳಗ್ಗೆ 11.00 ಗಂಟೆಗೆ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಹಾಗೆಯೇ, ಬೆಳಗ್ಗೆ 11.40 ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನವು ಹೊರಡಲಿದ್ದು, ಮಧ್ಯಾಹ್ನ 1.15ಕ್ಕೆ ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಾಸ್ಸಾಗಲಿದೆ. ಈ ನಿಟ್ಟಿನಲ್ಲಿ ಮಂಗಳೂರಿಗೆ ತೆರಳಲು ವಿಮಾನ ಕಾಯ್ದಿರಿಸಬೇಕಿದ್ದರೆ, ಪ್ರಯಾಣಿಕರು ಮುಂಬೈನ ಟರ್ಮಿನಲ್ ಟಿ-2ನಲ್ಲಿ ವರದಿ ಮಾಡಬಹುದಾಗಿದೆ.
ವಿಮಾನ ಹತ್ತುವ ಮುನ್ನ, ಕ್ವಾರಂಟೈನ್ ನಿಯಂತ್ರಿಸುವ ಬಗ್ಗೆ ಮಾರ್ಗಸೂಚಿ ನೀಡಲಾಗಿದ್ದು, ಮುಂಬೈನಿಂದ ಪ್ರಯಾಣಿಸುವ ಪ್ರಯಾಣಿಕರು ಮೊದಲು ಥರ್ಮಲ್ ಸ್ಕ್ರೀನಿಂಗ್ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೇ, ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಕ್ವಾರಂಟೈನ್ ಸ್ಟಾಂಪ್ ಅನ್ನು ಮುದ್ರಿಸಬೇಕಾಗುತ್ತದೆ. ವಿಮಾನದ ಮಾಹಿತಿ, ಆಗಮನದ ಸಮಯ, ಪ್ರಯಾಣಿಕರ ಮೊಬೈಲ್ ಸಂಖ್ಯೆ ಸೇರಿದಂತೆ ಪ್ರಯಾಣಿಕರ ವಿಳಾಸವನ್ನು ಒದಗಿಸುವ ಅಗತ್ಯವಿದ್ದು, ಈ ವಿವರಗಳನ್ನು ನೋಡೆಲ್ ಅಧಿಕಾರಿಯೊಂದಿಗೆ ಹಂಚಿಕೊಳ್ಳಬೇಕು.
ಇವೆಲ್ಲದರೊಂದಿಗೆ ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದರೊಂದಿಗೆ ಆಗಮನದ ಏಳು ದಿನಗಳ ಮೊದಲು ಮುಂಬೈನಿಂದ ನಿರ್ಗಮಿಸಲು ಇಚ್ಛಿಸುವ ಪ್ರಯಾಣಿಕರು ಕ್ವಾರಂಟೈನ್ ವಿನಾಯಿತಿ ಪಡೆಯಲು ಮುಂದಿನ ಅಥವಾ ಹಿಂದಿರುಗುವ ಪ್ರಯಾಣಕ್ಕಾಗಿ ದೃಢಪಡಿಸಿದ ಟಿಕೆಟ್ ನೀಡಬೇಕಾಗುತ್ತದೆ.
ಕ್ವಾರಂಟೈನ್ ನಿಯಮಗಳ ಪ್ರಕಾರ, ಅಂತರಾಷ್ಟ್ರೀಯ ಪ್ರಯಾಣಿಕರು ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅನ್ನು ಪಾಲಿಸಬೇಕಾಗುತ್ತದೆ ಹಾಗೂ ನಂತರ ಏಳು ದಿನಗಳ ಹೋಂ ಕ್ವಾರಂಟೈನ್ ಅನ್ನು ಕೂಡಾ ಪಾಲಿಸಬೇಕಾಗುತ್ತದೆ.
ಅಂತರಾಷ್ಟ್ರೀಯ ಪ್ರಯಾಣಿಕರು ದೇಶೀಯ ಪ್ರಯಾಣಿಕರಿಗಾಗಿ 14 ದಿನಗಳ ಹೋಂ ಕ್ವಾರಂಟೈನ್ ಅನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ಆಗಮನದ ಏಳು ದಿನಗಳ ಮುಂದೆ ಮುಂಬೈನಿಂದ ನಿರ್ಗಮಿಸಲು ಬಯಸಿರುವ ಎಲ್ಲಾ ದೇಶೀಯ ಪ್ರಯಾಣಿಕರನ್ನು ಕ್ವಾರಂಟೈನ್ನಿಂದ ವಿನಾಯಿತಿ ನೀಡಲಾಗುವುದು. ಅಲ್ಲದೇ, ಅವರು ಮುಂದಿನ ಅಥವಾ ಹಿಂದಿರುಗುವ ಪ್ರಯಾಣಕ್ಕಾಗಿ ದೃಢೀಕರಿಸಿದ ಟಿಕೆಟ್ ಅನ್ನು ನೀಡಲು ಸಮರ್ಥರಾಗಿರಬೇಕು.