ಮಂಗಳೂರು, ಜು 24 (DaijiworldNews/PY): ಸಮುದ್ರದ ನಡುವಿನಲ್ಲಿ ಮೀನುಗಾರ ದೋಣಿಯೊಂದು ಮಗುಚಿಬಿದ್ದಿದ್ದು, ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಸಸಿಹಿತ್ಲುವಿನಲ್ಲು ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಸಾಂದರ್ಭಿಕ ಚಿತ್ರ
ಸಸಿಹಿತ್ಲುವಿನ ತಾರನಾಥ್, ಸುಧಾಕರ್, ಹೇಮನಾಥ್ ಹಾಗೂ ಇನ್ನಿತರರು ಸಮುದ್ರಕ್ಕೆ ಮೀನು ಹಿಡಿಯಲು ಹೋಗಿದ್ದರು. ಆದರೆ, ಹವಾಮಾನದ ವೈಪ್ಯರಿತ್ಯದ ಕಾರಣ ಸಮುದ್ರದ ನಡುವೆ ದೋಣಿ ಮಗುಚಿದೆ.
ದೀಣಿ ಮಗುಚಿದ ಪರಿಣಾಮ ದೋಣಿಯಲ್ಲಿದ್ದ ಮೂವರು ಈಜಿ ದಡ ಸೇರದರೆ, ಉಳಿದಿಬ್ಬರು ಇನ್ನೊಂದು ದೋಣಿಯ ಸಹಾಯದಿಂದ ದಡ ಸೇರಿದ್ದಾರೆ. ಉಳಿದ ಓರ್ವ ಸಮುದ್ರದಲ್ಲಿ ಸಾಗುತ್ತಿದ್ದ ದೋಣಿಯವರೆಗೆ ಈಜಿ ಸ್ವಯಂ ರಕ್ಷಣೆಯಾಗಿದ್ದಾನೆ.
ಆರು ಮೀನುಗಾರರೂ ಕೂಡಾ ಅಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿ ದಡ ಸೇರಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.