ಮಂಗಳೂರು, ಜು 24 (DaijiworldNews/PY): ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಸದಸ್ಯರಾಗಿ ಮಂಗಳೂರಿನ ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ ಅವರು ನೇಮಕಗೊಂಡಿದ್ದಾರೆ.

ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಅವರು ಈ ಸಮಿತಿಗೆ ಅಧ್ಯಕ್ಷರಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪಕ್ಷ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಜ್ಜಾಗಿದ್ದು, ಈ ಸಮಿತಿಯನ್ನು ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ನೇತೃತ್ವದಲ್ಲಿ ರಚಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಗೆ ಸಂಬಂಧ ಪಟ್ಟಂತೆ ಶಿಸ್ತು ಕ್ರಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅವರ ವಿರುದ್ದ ಈ ಸಮಿತಿಯು ಕೆಪಿಸಿಸಿಗೆ ವರದಿ ಸಲ್ಲಿಸಲಿದೆ.
ಕೆ.ಬಿ. ಕೋಳಿವಾಡ, ಟಿ.ವಿ. ಮಾರುತಿ, ಸಯ್ಯದ್ ಜಿಯಾ ಉಲ್ಲಾ, ಮಲ್ಲಾಜಮ್ಮ, ಜೆ. ಹುಚ್ಚಪ್ಪ, ಜೆ. ಅಲೆಗ್ಸಾಂಡರ್, ಎಂ ಶಶಿಧರ ಹೆಗ್ಡೆ, ಜಲಜಾ ನಾಯ್ಕ, ರಾಣಿ ಸತೀಶ್, ಸಿ.ಎಂ. ಧನಂಜಯ, ಕೈಲಾಶ್ನಾಥ್ ಪಾಟೀಲ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಲ್ಲಿದ್ದು, ನಿವೇದಿತ್ ಆಳ್ವಾ ಸಮಿತಿಯ ಸಂಚಾಲಕರಾಗಿದ್ದಾರೆ.