ಮಂಗಳೂರು, ಏ 18 : ಟಾರ್ಗೆಟ್ ಗ್ರೂಪ್ ನ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಒಳಪೇಟೆ ನಿವಾಸಿ ಪ್ರಸ್ತುತ ಮಂಜೇಶ್ವರ ಪಾವೂರಿನ ಉಮರ್ ನವಾಫ್ ಬಂಧಿತ ಆರೋಪಿ. ಈತನನ್ನು ಪಾಂಡೇಶ್ವರ ಠಾಣಾ ಪೊಲೀಸರು ಮಹಾಕಾಳಿಪಡ್ಪು ಬಳಿಯಿಂದ ಬಂಧಿಸಿ ಆತನಿಂದ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಹಾಗೂ ಎರಡು ತಲವಾರುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ, ಸುಲಿಗೆ, ದರೋಡೆ, ಕಿಡ್ನಾಪ್ ಹೀಗೆ ಒಟ್ಟು ಏಳು ಪ್ರಕರಣಗಳು ಹಾಗೂ ಮಂಜೇಶ್ವರ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿವೆ. ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಾದ ದಾವೂದ್, ಮುಹಮ್ಮದ್ ಸಮೀರ್ ಯಾನೆ ಸಮೀರ್, ಮಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ನಾಚಿ, ರಿಯಾಝ್ ಯಾನೆ ರಿಯಾ ಯಾನೆ ಇಯ್ಯ ಮತ್ತು ನಮೀರ್ ಹಂಝ ಎಂಬವರನ್ನು ಬಂಧಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನಲ್ಲಿದ್ದಾರೆ.
ಟಾರ್ಗೆಟ್ ಗ್ರೂಪ್ ನ ಇಲ್ಯಾಸ್ 2018 ರ ಜ .13ರಂದು ಬೆಳಗ್ಗೆ ತನ್ನ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ದುಷ್ಖರ್ಮಿಗಳು ಚೂರಿಯಿಂದ ತಿವಿದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡ ಇಲ್ಯಾಸ್ ಸ್ಥಳದಲ್ಲೇ ಮೃತಪಟ್ಟಿದ್ದ.