ಉಡುಪಿ, ಜು. 25 (DaijiworldNews/MB) : ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಆಸ್ಪತ್ರೆಯಲ್ಲಿದ್ದರೂ ಕೂಡಾ ತಮ್ಮ ದಿನಚರಿಯ ಪೂಜೆ ಮತ್ತು ಪ್ರಾರ್ಥನೆಯನ್ನು ಮುಂದುವರಿಸಿದ್ದಾರೆ.

ಸ್ವಾಮೀಜಿಯವರ ಅನಾರೋಗ್ಯದ ಸುದ್ದಿ ಹರಿದಾಡಿದ ಬಳಿಕ ಸ್ವಾಮೀಜಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದ ಭಕ್ತರಿಗೆ ಆತಂಕಕ್ಕೆ ಒಳಗಾಗಿದ್ದರು.
ಸ್ವಾಮೀಜಿಯವರು ಚಾತುರ್ಮಾಸ ವೃತವನ್ನು ಕೈಗೊಂಡಿದ್ದರು ಆದರೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಪ್ರಸ್ತುತ ಕೆಎಂಸಿ ಆಸ್ಪತ್ರೆಯ ವೈದ್ಯರ ಆರೈಕೆಯಲ್ಲಿದ್ದಾರೆ. ಸ್ವಾಮೀಜಿಯವರು ತಮ್ಮ ಪೂಜೆಗೆ ಪಿಪಿಇ ಕಿಟ್ ಧರಿಸಿರುವುದು ಅವರ ಶಿಷ್ಯರಿಂದ ಸಹಾಯ ಪಡೆಯುತ್ತಿದ್ದಾರೆ.
''ಸ್ವಾಮೀಜಿ ಆರೋಗ್ಯವಾಗಿದ್ದಾರೆ ಮತ್ತು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ, ಒಂದು ವಾರಗಳ ಕಾಲ ಆಸ್ಪತ್ರೆಯಲ್ಲೇ ಇರುತ್ತಾರೆ. ಸ್ವಾಮೀಜಿಗಳ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ'' ಎಂದು ಆಸ್ಪತ್ರೆಯ ವೈದ್ಯರು ಭಕ್ತರಿಗೆ ಮತ್ತು ಶಿಷ್ಯರಿಗೆ ಭರವಸೆ ನೀಡಿದ್ದಾರೆ.