ಕುಂದಾಪುರ, ಜು 25 (DaijiworldNews/PY): ನಾಗರ ಪಂಚಮಿಯ ದಿನದಂದು ಜೀವಂತ ಹಾವಿಗೆ ಕುಂದಾಪುರದ ಸುಧೀಂದ್ರ ಐತಾಳ್, ಕಾಪುವಿನ ಗೋವರ್ಧನ್ ಭಟ್ ಹಾಲೆರೆದಿದ್ದಾರೆ.




ಜೆಸಿಬಿಯ ಕೆಲಸದ ಸಂದರ್ಭದಲ್ಲಿ ನಾಗರ ಹಾವೊಂದು ಗಾಯಗೊಂಡಿದ್ದು, ಉರಗ ತಜ್ಞ ಸುಧೀಂದ್ರ ಐತಾಳ್ ಅವರು ತಾವೇ ಸ್ವತಃ ಹಾವಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದು, ಉರಗಗಳು ನಿರುಪದ್ರವಿಗಳು. ಅವುಗಳ ಬಗ್ಗೆ ಕಾಳಜಿ ಇರಲಿ. ಅಲ್ಲದೇ, ಜೀವಂತ ನಾಗಗಳು ರೈತ ಸ್ನೇಹಿ ಎಂದು ಸುಧೀಂದ್ರ ಐತಾಳ್ ಅವರು ಹೇಳಿದ್ದಾರೆ. ಸದ್ಯ ಸುಧೀಂದ್ರ ಐತಾಳ್ ಅವರು ಹಾವನ್ನು ಮನೆಯಲ್ಲೇ ಸಾಕುತ್ತಿದ್ದು, ಅದಕ್ಕೆ ಬೇಕಾದ ಚಿಕಿತ್ಸೆ ನೀಡುತ್ತಿದ್ದಾರೆ.
ಇನ್ನು ಕಾಪು ಬಳಿಕ ಮಜೂರು ನಿವಾಸಿ ಗೋವರ್ಧನ್ ಭಟ್ ಅವರು ಕೂಡಾ ಈ ಬಾರಿಯೂ ತಮ್ಮ ಮನೆಯಲ್ಲಿ ಶುಶ್ರೂಷೆ ಪಡೆಯುತ್ತಿರುವ ಜೀವಂತ ನಾಗರ ಹಾವುಗಳಿಗೆ ಜಲಾಭಿಷೇಕ ನಡೆಸಿ, ದೀಪ ಬೆಳಗಿ ನಾಗರ ಪಂಚಮಿ ಹಬ್ಬ ಆಚರಿಸಿದರು.
ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆದ ಗೋವರ್ಧನ್ ಭಟ್ ಅವರು ಕ್ಯಾಟರಿಂಗ್ ಕೆಲಸವನ್ನೂ ಮಾಡುತ್ತಾರೆ. ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆದ ಗೋವರ್ಧನ ಭಟ್ರವರು ಕ್ಯಾಟರಿಂಗ್ ವೃತ್ತಿಯನ್ನೂ ಕಂಡು ಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ರಸ್ತೆಯಲ್ಲಿ ಅಪಘಾತಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ನಾಗರ ಹಾವುಗಳನ್ನು ತಂದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ, ಅದು ಸಂಪೂರ್ಣ ಗುಣ ಮುಖವಾದಾಗ ಮತ್ತೆ ಅದನ್ನು ಕಾಡಿಗೆ ಬಿಡುವುದು ಇವರ ಕಾಯಕ.
ಎಲ್ಲೇ ಗಾಯಗೊಂಡಿರುವ ಹಾವು ಬಗ್ಗೆ ಎಲ್ಲೇ ದೂರವಾಣಿ ಕರೆ ಬಂದರೂ, ಯಾವುದೇ ಫಲಾಪೇಕ್ಷೆ ಇಲ್ಲದೆ ಅಲ್ಲಿಗೆ ಧಾವಿಸುವ ಗೋರ್ವಧನ ಭಟ್ ಅವರಿಗೆ ನಾಗರ ಹಾವಿನ ಡಾಕ್ಟರ್ ಎಂದು ಹೇಳುವುದೂ ಇದೆ.
ಪ್ರತೀ ಬಾರಿಯೂ ನಾಗರಪಂಚಮಿ ಸಮಯ ಅವರ ಮನೆಯಲ್ಲಿ ಒಂದೆರಡು ನಾಗರ ಹಾವು ಇದ್ದೇ ಇರುತ್ತದೆ. ಈ ಬಾರಿ ಅತೀ ಹೆಚ್ಚು 10 ನಾಗರ ಹಾವುಗಳು ಶುಶ್ರೂಷೆ ಪಡೆಯುತ್ತಿದೆ.
ನಾಗರ ಪಂಚಮಿ ದಿನ ಗೋವರ್ಧನ್ ಭಟ್ರವರು ಎಲ್ಲಾ ನಾಗರ ಹಾವುಗಳನ್ನು ಬೋನ್ನಿಂದ ಹೊರತೆಗೆದು ಅದಕ್ಕೆ ಜಲಾಭಿಷೇಕ ನಡೆಸಿ ಆರತಿ ಬೆಳಗಿದರು.