ಉಡುಪಿ, ಜು. 26 (DaijiworldNews/SM): ಜಿಲ್ಲೆಯಲ್ಲಿ ಮತ್ತೆ 170 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಸೊಂಕಿತರ ಸಂಖ್ಯೆ 3388 ಕ್ಕೆ ಏರಿಕೆಯಾಗಿದೆ.

ರವಿವಾರದಂದು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ 125 ಮಂದಿ ಗುಣಮುಖರಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಒಟ್ಟು 2133 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇನ್ನು 564 ಮಂದಿಯ ವರದಿಗಳು ಬರಲು ಬಾಕಿ ಇದೆ.
ಉಡುಪಿಯಲ್ಲಿ ಈವರೆಗೆ ಕೋವಿಡ್ ನಿಂದಾಗಿ 14 ಮಂದಿ ಮೃತಪಟ್ಟಿದ್ದಾರೆ.