ಮಂಗಳೂರು, ಜು. 26 (DaijiworldNews/SM): ದ.ಕ. ಜಿಲ್ಲೆಯಲ್ಲಿ ರವಿವಾರದಂದು ಮತ್ತೆ 8 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ.

ಮಂಗಳೂರು ನಿವಾಸಿ 71 ವರ್ಷದ ವ್ಯಕ್ತಿ, ಮಂಗಳೂರು ನಿವಾಸಿ 70 ವರ್ಷದ ವ್ಯಕ್ತಿ, ಪುತ್ತೂರು ನಿವಾಸಿ 55 ವರ್ಷದ ವ್ಯಕ್ತಿ, ಮಂಗಳೂರಿನ 56 ವರ್ಷದ ವ್ಯಕ್ತಿ, ಮಂಗಳೂರಿನ 72 ವರ್ಷದ ವ್ಯಕ್ತಿ, ಮಂಗಳೂರಿನ 45 ವರ್ಷದ ಮಹಿಳೆ, ಮಂಗಳೂರಿನ 55 ವರ್ಷದ ವ್ಯಕ್ತಿ, 70 ವರ್ಷದ ಮಂಗಳೂರಿನ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.
ಮೃತರು ಇತರ ಅನಾರೋಗ್ಯಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅಂತಿಮ ಹಂತದಲ್ಲಿ ಕೊರೊನಾ ಪತ್ತೆಯಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.