ಕಾಸರಗೋಡು, ಜು. 27 (DaijiworldNews/MB) : ನಿಯಂತ್ರಣ ತಪ್ಪಿದ ಜೆಸಿಬಿ ಎದುರಿನಿಂದ ಬಂದ ಬೊಲೊರೋ ಜೀಪಿಗೆ ಡಿಕ್ಕಿ ಹೊಡೆದ ಘಟನೆ ಕೋಜಿಕ್ಕೋಡ್ - ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಅಪಘಾತಕ್ಕೆ ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ಯುವಕ ನೋರ್ವ ಪವಾಡ ಸದೃಶವಾಗಿ ಪಾರಾಗಿದ್ದಾನೆ.

ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಜೆ ಸಿ ಬಿ ಯಂತ್ರ ದ ಚಾಲಕ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಲು ಬಲಬದಿಗೆ ತಿರುಗಿಸಿದ್ದು, ಈ ಸಂದರ್ಭದಲ್ಲಿ ಅದೇ ದಾರಿಯಾಗಿ ಬಂದ ಬೊಲೊರೋ ಜೀಪು ಜೆಸಿಬಿಗೆ ಡಿಕ್ಕಿ ಹೊಡೆದಿದ್ದು, ರಸ್ತೆ ಬದಿ ಇದ್ದ ಬೈಕ್ ಸವಾರ ಅಪಘಾತಕ್ಕೆ ಸಿಲುಕಿದರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಜೆಸಿಬಿ ಚಾಲಕ ಹಾಗೂ ಬೊಲೊರೋ ಚಾಲಕ ಅಪಾಯದಿಂದ ಪಾರಾಗಿದ್ದಾರೆ