ಕಾಪು, ಜು. 27 (DaijiworldNews/MB) : ನಕಲಿ ವೇತನ ಸ್ಲಿಪ್ಗಳನ್ನು ಸಲ್ಲಿಸಿ ಬ್ಯಾಂಕ್ ಆಫ್ ಬರೋಡಾಗೆ ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಕಾಪು ಪೊಲೀಸರು ಓರ್ವ ವೈದ್ಯೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಡಾ. ರಿನೇಟ್ ಸೋನಿಯಾ ಡಿಸೋಜ ಮತ್ತು ವಿಜಯ್ ಕೊಠಾರಿ ಬಂಧಿತರು.
ಬ್ಯಾಂಕ್ ಆಫ್ ಬರೋಡಾದ ಮೂಡುಬೆಟ್ಟು ಶಾಖೆಗೆ ಭೇಟಿ ನೀಡಿದ್ದ ಡಾ. ರಿನೇಟ್ ಡಿಸೋಜ ತಾನು ಮಾಹೆ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದು, ತನಗೆ ಹಾಗೂ ತನ್ನ ಸಹೋದರನಿಗೆ ಕಾರು ಖರೀದಿಗೆ ಸಾಲಕ್ಕೆ ಅರ್ಜಿ ಸಲ್ಲಿಸಲು ಯತ್ನಿಸಿದ್ದರು.
ಬ್ಯಾಂಕ್ ವ್ಯವಸ್ಥಾಪಕರು ದಾಖಲೆಗಳ ಪರಿಶೀಲನೆ ನಡೆಸಿದಾಗ ಡಾ. ರಿನೇಟ್ ಡಿಸೋಜಾ ಆ ಬ್ಯಾಂಕ್ನಲ್ಲಿ ಉದ್ಯೋಗದಲ್ಲಿಲ್ಲ ಮತ್ತು ಆಕೆ ಸಲ್ಲಿಸಿದ ಸಂಬಳದ ದಾಖಲೆಗಳು ನಕಲಿ ಎಂದು ಸಾಬೀತಾಯಿತು.
ಕಾಪು ಪೊಲೀಸರು ಮೊದಲು ಡಾ. ರಿನೆಟ್ನ್ನು ಬಂಧಿಸಿದ್ದು ವಿಚಾರಣೆಯ ಬಳಿಕ ವಿಜಯ್ ಕೊಠಾರಿ ಸಾಲ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾನೆ ಎಂದು ಒಪ್ಪಿಕೊಂಡಿದ್ದಾಳೆ.
ಕಾಪು ಪೊಲೀಸ್ ಸಬ್ಇನ್ಸ್ಪೆಕ್ಟರ್ ರಾಜಶೇಖರ್ ಬಿ ಸಾಗನೂರ್, ಅಪರಾಧ ವಿಭಾಗದ ಎಸ್ಐ ಐ ಆರ್ ಗಡ್ಡೆಕರ್, ಪ್ರೊಬೆಷನರಿ ಎಸ್ಐ ಅನಿಲ್ ಮಾದರ, ಸಿಬ್ಬಂದಿಗಳಾದ ರವಿಕುಮಾರ್, ರಮೇಶ್, ಮಹಾಬಲ ಶೆಟ್ಟಿಗಾರ್, ಸುಲೋಚನಾ, ಶ್ರೀನಾಥ್, ಪರಶುರಾಮ, ಅರುಣ್ ಕುಮಾರ್ ಮತ್ತು ಆನಂದ ಬಂಧನ ಕಾರ್ಯಾಚರಣೆಯ ಭಾಗವಾಸಿದ್ದರು.