ಕಾಸರಗೋಡು, ಜು. 27 (DaijiworldNews/MB) : ಕಾಸರಗೋಡು ಜಿಲ್ಲೆಯಲ್ಲಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಂಗಡಿಗಳು ತೆರೆದು ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

ಆದರೆ ಕಂಟೈ ನ್ಮೆಂಟ್ ಝೋನ್ ಗಳಲ್ಲಿ ದಿನ ಬಿಟ್ಟು ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಗತ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ತೆರೆಯಬಹುದು. ಕಾಸರಗೋಡು ಜಿಲ್ಲೆಯ ಉಳಿದ ಪ್ರದೇಶಗಳಲ್ಲಿ ಎಲ್ಲ ಅಂಗಡಿಗಳೂ ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು. ಆದರೆ ಅಂಗಡಿಗಳಲ್ಲಿ ಜನ ಗುಂಪು ಸೇರುವುದು ಸಲ್ಲದು, ಮಾಸ್ಕ್ ಧಾರಣೆ, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಿಕೆ ಇತ್ಯಾದಿ ಕಡ್ಡಾಯವಾಗಿ ಪಾಲಿಸಬೇಕು. ಅಂಗಡಿಗಳ ಸಿಬ್ಬಂದಿ ಮಾಸ್ಕ್ , ಗ್ಲೌಸ್ ಧರಿಸಲೇ ಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಗಡಿ ಮುಚ್ಚುಗಡೆ ಸಹಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸರಿಗೆ ಆದೇಶ ನೀಡಿದ್ದಾರೆ.
ಕಂಟೈ ನ್ಮೆಂಟ್ ಝೋನ್ ಗಳ ಸಹಿತ ಪ್ರದೇಶಗಳ ಅಕ್ಷಯ ಕೇಂದ್ರಗಳು ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ತೆರೆದು ಕಾರ್ಯಾರಿಸಬಹುದು. ಮೆಡಿಕಲ್ ಶಾಪ್ ಗಳಿಗೆ ಸಮಯದ ಅವಧಿ ಕಡ್ಡಾಯವಿಲ್ಲ. ಕಂಟೈ ನ್ಮೆಂಟ್ ಝೋನ್ ಗಳಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು, ಮೋಟಾರು ವಾಹನ ಶಾಪ್ ಗಳು ಇತ್ಯಾದಿ ತೆರೆಯಕೂಡದು ಎಂದವರು ಹೇಳಿದರು.