ಉಡುಪಿ, ಏ 19 : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 24 ದಿನಗಳು ಮಾತ್ರಾ ಉಳಿದಿವೆ. ಆದರೆ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆನ್ನುವುದು ಇನ್ನೂ ಘೋಷಣೆಯಾಗದೇ ಉಳಿದಿರುವುದು, ಬಿಜೆಪಿ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ವಿನಯ ಕುಮಾರ್ ಸೊರಕೆಯವರೇ ಕಣಕ್ಕಿಳಿದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದರೆ, ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿಯ ಘೋಷಣೆಯಾಗದೇ ಇರುವುದು ಕಾರ್ಯಕರ್ತರಲ್ಲಿ ನಿರುತ್ಸಾಹಕ್ಕೆ ಕಾರಣವಾಗಿದೆ. ಶಿಸ್ತಿನ ಪಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಕ್ಷದಲ್ಲಿ ನಾಯಕರುಗಳೇ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆಸುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಕಾಪು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಗಾಗಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಸಮಾಜ ಸೇವಕ ಮತ್ತು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಯುವ ಮುಖಂಡ ಯಶ್ಪಾಲ್ ಸುವರ್ಣ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಪಕ್ಷದೊಳಗೆ ಟಿಕೆಟ್ಗಾಗಿ ಹಲವರ ನಡುವೆ ಪೈಪೋಟಿ ಕಾಣಿಸಿರುವುದರಿಂದ ಪಕ್ಷ ಕೂಡಾ ಅಭ್ಯರ್ಥಿಯ ಆಯ್ಕೆಗೆ ಕಗ್ಗಂಟಾಗಿದೆ.
ಕಾಪು ಕ್ಷೇತ್ರ ಬಿಜೆಪಿಯ ಕೆಲವೊಂದು ನಾಯಕರು ಮತ್ತು ಕೆಲವು ಬೂತ್ ಸಮಿತಿಗಳು ಮಾಜಿ ಶಾಸಕ ಲಾಲಾಜಿ ಮೆಂಡನ್ ಅವರನ್ನು ಬೆಂಬಲಿಸುತ್ತಿದ್ದರೆ, ಕ್ಷೇತ್ರ ಸಮಿತಿ ಕೆಲವೊಂದು ನಾಯಕರು ಮತ್ತು ಬೂತ್ ಸಮಿತಿಗಳ ಪದಾಽಕಾರಿಗಳು ಮತ್ತು ಕಾರ್ಯಕರ್ತರ ಸಮೂಹ ಸುರೇಶ್ ಶೆಟ್ಟಿ ಗುರ್ಮೆ ಅವರ ಪರವಾಗಿ ಟಿಕೆಟ್ಗಾಗಿ ಲಾಭಿ ನಡೆಸುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಲಾಲಾಜಿ ಆರ್. ಮೆಂಡನ್ ಅವರು ಪಕ್ಷ ಸಂಘಟನೆಗಾಗಿ ದುಡಿಯುತ್ತಿರುವ ಬಗ್ಗೆ ಅವರ ಬೆಂಬಲಿಗರು ಮತ್ತು ಬಿಜೆಪಿಗೆ ಬಂದ ಬಳಿಕ ಸುರೇಶ್ ಶೆಟ್ಟಿ ಗುರ್ಮೆ ಅವರು ಪಕ್ಷಕ್ಕಾಗಿ ದುಡಿದು, ಲೋಕಸಭೆ ಸಹಿತ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿಗಾಗಿ ನಡೆಸಿರುವ ಪ್ರಯತ್ನವನ್ನು ಗಮನಿಸುವಂತೆ ನಾಯಕರಿಗೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಕಡಿಮೆ ಮತದ ಅಂತರದಲ್ಲಿ ಸೋತ ಮಾಜಿ ಶಾಸಕ ಮತ್ತು ಮೊಗವೀರ ಸಮುದಾಯದ ಅಭ್ಯರ್ಥಿಯೆಂಬ ಲಾಭಿ ಲಾಲಾಜಿ ಆರ್. ಮೆಂಡನ್ ಅವರ ಪರವಾಗಿದ್ದರೆ, ಸೇವೆ ಮತ್ತು ಸಂಘಟನೆಯ ವಿಚಾರದಲ್ಲಿ ಕಾರ್ಯಕರ್ತರು ಹಾಗೂ ಬಂಟ ಸಮುದಾಯದ ಲಾಭಿ ಸುರೇಶ್ ಶೆಟ್ಟಿ ಗುರ್ಮೆ ಪರವಾಗಿ ನಿಂತಿದ್ದಾರೆ. ಜಿಲ್ಲೆಯ ಬೈಂದೂರು ಮತ್ತು ಕುಂದಾಪುರದಲ್ಲಿ ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ ಹಾಕಿರುವುದು ಸುರೇಶ್ ಶೆಟ್ಟಿ ಗುರ್ಮೆ ಅವರಿಗೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಇವರೆಡನ್ನೂ ಮೀರಿ ಪಕ್ಷದೊಳಗೆ ನಡೆಸಲಾಗಿರುವ ಆಂತರಿಕ ಸರ್ವೆಯಲ್ಲಿ ಕಾರ್ಯಕರ್ತರು ಗೆಲ್ಲುವ ಅಭ್ಯರ್ಥಿಯ ಪರ ತೀರ್ಪನ್ನು ನೀಡಿದ್ದು, ಪಕ್ಷ ಯಾವುದಕ್ಕೆ ಮನ್ನಣೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕಾಪು ಕ್ಷೇತ್ರದಲ್ಲಿ ಲಾಲಾಜಿ, ಗುರ್ಮೆ, ಯಶ್ಪಾಲ್ ಹೊರತು ಪಡಿಸಿ, ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು ಕಟಪಾಡಿ ಶಂಕರ ಪೂಜಾರಿ, ಸುರೇಶ್ ನಾಯಕ್, ಶೀಲಾ ಕೆ. ಶೆಟ್ಟಿ, ಗೀತಾಂಜಲಿ ಸುವರ್ಣ, ನಯನಾ ಗಣೇಶ್ ಕೂಡಾ ಅವಕಾಶ ಸಿಗುತ್ತಿದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಅವಳಿ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿರುವುದರಿಂದ ಮತ್ತು ಒಂದು ಕಡೆಗೆ ಮಹಿಳೆಗೆ ಅವಕಾಶ ನೀಡಬೇಕೆಂಬ ನಿರ್ಧಾರಕ್ಕೆ ಬಂದರೆ ಅವಕಾಶ ಮತ್ತೋರ್ವರ ಪಾಲಿಗೆ ಹೋದರೂ ಅಚ್ಚರಿಯೇನಿಲ್ಲ.
ಕಾಪು ಕ್ಷೇತ್ರ ಬಿಜೆಪಿಯ ಟಿಕೆಟ್ಗಾಗಿ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದ ಪೈಪೋಟಿ ಕಾಣಿಸಿಕೊಂಡಿದ್ದು, ರೇಸ್ನಲ್ಲಿರುವ ನಾ