ಕಾಸರಗೋಡು, ಜು 27 (DaijiworldNews/SM): ಕೆಲ ದಿನಗಳ ಬಳಿಕ ಸೋಮವಾರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಸೋಮವಾರ ಜಿಲ್ಲೆಯಲ್ಲಿ 38 ಮಂದಿಗೆ ಸೋಂಕು ದೃಡಪಟ್ಟಿದೆ.

ಈ ಪೈಕಿ 26 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಈ ನಡುವೆ ಸೋಮವಾರದಂದು ಮತ್ತೆ 53 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿತ್ತು.
ಚೆಮ್ನಾಡ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತೀ ಹೆಚ್ಚು 18 ಮಂದಿಗೆ ಸೋಂಕು ಪತ್ತೆಯಾಗಿದೆ. ಕಳ್ಳಾರ್ 4, ಕಾಸರಗೋಡು , ಮಂಗಲ್ಪಾಡಿ ತಲಾ ಎರಡು, ಚೆಂಗಳ , ಚೆರ್ವತ್ತೂರು , ಪನತ್ತಡಿ , ಪುಲ್ಲೂರು ಪೆರಿಯ ತಲಾ ಇಬ್ಬರಲ್ಲಿ, ಮಂಜೇಶ್ವರ ಮತ್ತು ಪಳ್ಳಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಏಳು ಮಂದಿ ಹೊರ ರಾಜ್ಯ ಹಾಗೂ ಐದು ಮಂದಿ ವಿದೇಶದಿಂದ ಬಂದವರಿಗೆ ಸೋಂಕು ತಗಲಿದೆ. ಜಿಲ್ಲೆಯಲ್ಲಿ 4,329 ಮಂದಿ ನಿಗಾದಲ್ಲಿದ್ದು, 1045 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.