ಮಂಗಳೂರು, ಜು 27 (DaijiworldNews/SM): ವಂದೇ ಭಾರತ್ ಮಿಷನ್ ನಡಿಯಲ್ಲಿ ವಿದೇಶದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಭಾರತೀಯರನ್ನು ಕರೆ ತರುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆದರೆ, ಕರ್ನಾಟಕಕ್ಕೆ ವಿಮಾನಗಳ ಹಾರಾಟ ಕಡಿಮೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಆದರೆ, ಐದನೇ ವೇಳಾಪಟ್ಟಿ ಪ್ರಕಟಗೊಂಡಿದೆ. ಅದರಂತೆ ಆಗಸ್ಟ್ ಮೊದಲ ಹಾಗೂ ಎರಡನೇ ವಾರದಲ್ಲಿ ಏಳು ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎನ್ನುವ ಮಾಹಿತಿ ಲಭಿಸಿದೆ.

ಆಗಸ್ಟ್ 5 ರಂದು ಮೊದಲ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.40ಕ್ಕೆ ಹೊರಟು ದುಬೈ, ಟರ್ಮಿನಲ್ 2 ಕ್ಕೆ 14.30 ಕ್ಕೆ ತಲುಪಲಿದೆ. ಎರಡನೇ ವಿಮಾನ ಆಗಸ್ಟ್ 6 ರಂದು ಮಧ್ಯಾಹ್ನ 12.40 ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟು ದುಬೈ, ಟರ್ಮಿನಲ್ 2 ಕ್ಕೆ 14.30 ಕ್ಕೆ ತಲುಪಲಿದೆ.
ಬಳಿಕ ಎರಡು ದಿನಗಳ ಬಿಡುವು ಇರಲಿದ್ದು, ಅದಾದ ನಂತರ ಮೂರನೇ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಆಗಸ್ಟ್ 9 ರಂದು ಮಧ್ಯಾಹ್ನ 12.40 ಕ್ಕೆ ಹೊರಟು ದುಬೈ, ಟರ್ಮಿನಲ್ 2 ಕ್ಕೆ 14.30 ಕ್ಕೆ ತಲುಪಲಿದೆ.
ಮಂಗಳೂರಿನಿಂದ ದುಬೈ ಹಾರಾಟದ ಜೊತೆಗೆ ಆಗಸ್ಟ್ 8 ರಂದು ಬೆಳಿಗ್ಗೆ 11.05 ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಶಾರ್ಜಾಗೆ ವಿಮಾನ ಹಾರಾಟ ನಡೆಯಲಿದೆ. ಅದು ಆ ದಿನ ಮಧ್ಯಾಹ್ನ 13.00 ಕ್ಕೆ ಶಾರ್ಜಾ ವಿಮಾನ ನಿಲ್ದಾಣವನ್ನು ತಲುಪಲಿದೆ.
ಬಳಿಕ ಒಂದುವಾರಗಳ ನಂತರ ಅಂದರೆ, ಆಗಸ್ಟ್ 15 ರಂದು ಶಾರ್ಜಾಗೆ ಎರಡನೇ ವಿಮಾನ ಕಾರ್ಯಾಚರಣೆ ನಡೆಸಲಿದೆ. ಈ ವಿಮಾನವು ಮಂಗಳೂರು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 11.05 ಕ್ಕೆ ಹೊರಟು ಶಾರ್ಜಾ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 13.00 ಕ್ಕೆ ತಲುಪಲಿದೆ.
ಮತ್ತೊಂದೆಡೆ, ಆಗಸ್ಟ್ 7 ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿಗೂ ವಿಮಾನ ಹಾರಾಟ ನಡೆಸಲಿದೆ. ಮಂಗಳೂರಿನಿಂದ 12.40 ಕ್ಕೆ ಹೊರಟು ಅಬುಧಾಬಿ ವಿಮಾನ ನಿಲ್ದಾಣಕ್ಕೆ ಸಂಜೆ 14.30 ಕ್ಕೆ ತಲುಪಲಿದೆ.
ಆಗಸ್ಟ್ 14 ರಂದು 12.40 ಕ್ಕೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಏಳು ದಿನಗಳ ಅವಧಿಯ ನಂತರ ಮಂಗಳೂರಿನಿಂದ ಇನ್ನೊಂದು ವಿಮಾನ ಹಾರಾಟ ನಡೆಯಲಿದೆ. ಅದು ಆ ದಿನದ ನಂತರ ಸಂಜೆ 14.30 ಕ್ಕೆ ವಿಮಾನ ನಿಲ್ದಾಣವನ್ನು ತಲುಪಲಿದೆ. ಸದ್ಯ ಹೊರಡಿಸಿರುವ ವೇಳಾಪಟ್ಟಿಯಲ್ಲಿ ಈ ರೀತಿಯಲ್ಲಿ ಮಂಗಳೂರಿನಿಂದ ಕಾರ್ಯಾಚರಣೆ ಬಗ್ಗೆ ಉಲ್ಲೇಖಗಳಿವೆ.