ಮಂಗಳೂರು, ಜು 28 (Daijiworld News/MSP): ಕೋವಿಡ್ -19 ಸೋಂಕಿನಿಂದ ಗುಣಮುಖಗೊಂಡ ವ್ಯಕ್ತಿಗಳ ದೇಹದಲ್ಲಿ ರೋಗ ನಿರೋಧಕ ಕಣಗಳನ್ನು ತೆಗೆದು, ರೋಗದಿಂದ ಬಳಲುತ್ತಿರುವ ಮತ್ತೊಬ್ಬ ವ್ಯಕ್ತಿಗೆ ಸೇರಿಸುವ ಪ್ಲಾಸ್ಮಾ ಚಿಕಿತ್ಸಾ ವಿಧಾನ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆರಂಭಿಸಲೂ ಅನುಮತಿಸುವಂತೆ ಕೋರಿ ದ.ಕ ಜಿಲ್ಲಾಡಳಿತ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ’ಗೆ ಪತ್ರ ಬರೆಯಲಾಗಿದ್ದು ಅನುಮತಿಯ ನಿರೀಕ್ಷೆಯಲ್ಲಿದೆ.

ದ.ಕ ಜಿಲ್ಲೆಯಲ್ಲಿ 119 ಮಂದಿ ಈಗಾಗಲೆ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಹೀಗಾಗಿ ಐಸಿಎಂಆರ್ ಒಂದು ವೇಳೆ ಅನುಮತಿ ನೀಡಿದರೆ ಜಿಲ್ಲೆಯಲ್ಲೂ ಕೊರೊನಾ ರೋಗಿಗಳಿಗೆ ಹೊಸ ಭರವಸೆ ನೀಡಲಿದೆ.
ಅದರಲ್ಲೂ ಉಸಿರಾಟದ ಸಮಸ್ಯೆಯಿಂದ ಬಳಲುವ ರೋಗಿಗೆ ಪ್ಲಾಸ್ಮಾ ಚಿಕಿತ್ಸಾ ವರದಾನವಾಗಲಿದೆ. ಒಬ್ಬ ದಾನಿಗಳಿಂದ ಸಂಗ್ರಹಿಸುವ ಪ್ಲಾಸ್ಮಾದ ಪ್ರಮಾಣವನ್ನು ಅವಲಂಬಿಸಿ, ಕನಿಷ್ಠ ಇಬ್ಬರು ಮತ್ತು ಗರಿಷ್ಠ ಐದು ರೋಗಿಗಳನ್ನು ಉಳಿಸಬಹುದಾಗಿದೆ. ಹೀಗಾಗಿ ಸರ್ಕಾವೂ ಪಾಸ್ಮಾ ದಾನಿಗಳಿಗೆ ಉತ್ತೇಜನ ನೀಡುತ್ತಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಅನುಮತಿ ಲಭಿಸಿದ ಬಳಿಕವಷ್ಟೇ ವೆನ್ಲಾಕ್ ನಲ್ಲಿ ಪಾಸ್ಮಾ ಥೆರಪಿ ಲಭ್ಯತೆಯ ಬಗ್ಗೆ ನಿರ್ಧಾರವಾಗಲಿದೆ.